ಮುಂದಿನ ವರ್ಷ ಐಪಿಎಲ್ ಗೆ ಯಾವ ತಂಡ ಔಟ್? ಯಾವ ತಂಡ ಇನ್?

ಸೋಮವಾರ, 1 ಮೇ 2017 (20:30 IST)
ನವದೆಹಲಿ: ಮುಂದಿನ ಐಪಿಎಲ್ ಆವೃತ್ತಿಗೆ ಈ ಆವೃತ್ತಿಯಲ್ಲಿದ್ದ ಪುಣೆ ಮತ್ತು ಗುಜರಾತ್ ಲಯನ್ಸ್ ತಂಡಗಳು ಆಡೋದಿಲ್ಲ. ಅದರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಆಡಲಿವೆ ಎಂದು ವರದಿಗಳು ಬಂದಿವೆ.

 
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಈ ಎರಡೂ ತಂಡಗಳು ಐಪಿಎಲ್ ನಿಂದ ಹೊರ ಬಿದ್ದ ನಂತರ ಪುಣೆ ಸೂಪರ್ ಜೈಂಟ್ ಮತ್ತು ಗುಜರಾತ್ ಲಯನ್ಸ್ ತಂಡಗಳು ಹುಟ್ಟಿಕೊಂಡಿತು. ಇದೀಗ ಎರಡು ವರ್ಷದ ನಿಷೇಧ ಶಿಕ್ಷೆ ಮುಕ್ತಾಯಗೊಳ್ಳಲಿದೆ.

ಹೀಗಾಗಿ ಎರಡೂ ತಂಡಗಳು ಮುಂದಿನ ಆವೃತ್ತಿಯಲ್ಲಿ ಆಡುವ ಅರ್ಹತೆ ಪಡೆಯಲಿದೆ. ಅಲ್ಲದೆ, ಧೋನಿ ಸೇರಿದಂತೆ ಪ್ರಮುಖ ಆಟಗಾರರು ಮುಂದಿನ ವರ್ಷಕ್ಕೆ ಹರಾಜಿಗೆ ಲಭ್ಯರಿರಲಿದ್ದಾರೆ. ಹೀಗಾಗಿ ಎರಡೂ ತಂಡಗಳ ಮಾಲಿಕರು ಮತ್ತೆ ಕಣಕ್ಕಿಳಿಯುವ ಉತ್ಸಾಹದಲ್ಲಿವೆ.

‘ಮುಂದಿನ ವರ್ಷದಿಂದ ರಾಜಸ್ಥಾನ್ ಮತ್ತು ಚೆನ್ನೈ ತಂಡಗಳು ಮತ್ತೆ ಕಣಕ್ಕಿಳಿಯಲಿವೆ. ಆದರೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಇರಾದೆ ಬಿಸಿಸಿಐಗಿಲ್ಲ’ ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ