ಹೈದ್ರಾಬಾದ್`ಗೆ ತಟ್ಟಿದ ಆರೆಂಜ್ ಕ್ಯಾಪ್ ಶಾಪ..? ಸನ್ ರೈಸರ್ಸ್ ಸೋಲಿನ ಹಿಂದಿದೆ ಕುತೂಹಲಕಾರಿ ಲೆಕ್ಕಾಚಾರ

ಗುರುವಾರ, 18 ಮೇ 2017 (17:29 IST)
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಎರಡನ್ನೂ ಹೊಂದಿರುವ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿರುವ ಡೇವಿಡ್ ವಾರ್ನರ್ ಮತ್ತು ಹೆಚ್ಚು ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಈ ತಂಡದಲ್ಲಿದ್ದಾರೆಹಂತದ ಆದರೂ ತಂಡ ಪ್ಲೇಆಫ್ಸ್ ಹಂತದಲ್ಲೇ ಹೊರಬಿದ್ದಿದೆ.
 

ಕುತೂಹಲದ ಸಂಗತಿಯರೆಂದರೆ ಆರೆಂಜ್ ಕ್ಯಾಪ್ ಪಡೆದಿರುವ ಆಟಗಾರನಿರುವ ಐಪಿಎಲ್`ನ ತಂಡ ಸೋತಿರುವ ಉದಾಹರಣೆಗಳೇ ಹೆಚ್ಚು. 2014ರಲ್ಲಿ ಮಾತ್ರ ಉತ್ತಪ್ಪ ಆರೆಂಜ್ ಕ್ಯಾಪ್  ಕೋಲ್ಕತ್ತಾ ತಂಡ ಐಪಿಎಲ್ ಟ್ರೋಫಿ ಗೆದ್ದಿದೆ. ಉಳಿದೆಲ್ಲ ಸರಣಿಗಳಲ್ಲಿ ಆರೆಂಜ್ ಕ್ಯಾಪ್ ಪಡೆದಿರುವ ಆಟಗಾರನಿರುವ ತಂಡ ಕಪ್ ಗೆದ್ದಿಲ್ಲ.

ಕಳೆದ ವರ್ಷ ವಿರಾಟ್ ಕೊಹ್ಲಿ 973 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆದರೆ, ಫೈನಲ್`ನಲ್ಲಿ ಹೈದ್ರಾಬಾದ್ ವಿರುದ್ಧ ಸೋಲುವ ಮೂಲಕ ಆರ್ಸಿಬಿ ಕಪ್ ಗೆಲ್ಲುವ ಆಸೆಗ ನಿರಾಸೆಯಾಗಿತ್ತು. 2010ರಲ್ಲಿ ಸಚಿನ್ 660 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಫೈನಲ್`ನಲ್ಲಿ ಮುಂಬೈ ತಂಡ ಚೆನ್ನೈ ವಿರುದ್ಧ ಮುಗ್ಗರಿಸಿತ್ತು.
ಇನ್ನೂ ಪರ್ಪಲ್ ಕ್ಯಾಪ್ ವಿಚಾರದಲ್ಲೀ ಇದೇ ಪರಿಸ್ಥಿತಿ ಇದೆ. ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿರುವ ಆಟಗಾರನಿದ್ದ ತಂಡ 3 ಬಾರಿ ಮಾತ್ರ ಕಪ್ ಗೆದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
I

ವೆಬ್ದುನಿಯಾವನ್ನು ಓದಿ