ಪಂದ್ಯ ಪುರುಷನ ಹೆಸರು ಘೋಷಿಸುವುದನ್ನೇ ಮರೆತ ರವಿ ಶಾಸ್ತ್ರಿ

ಶುಕ್ರವಾರ, 14 ಏಪ್ರಿಲ್ 2017 (09:23 IST)
ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯ ಮುಗಿದ ಮೇಲೆ ನಡೆದ ಪ್ರಶಸ್ತಿ ಸಮಾರಂಭದಲ್ಲಿ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಎಡವಟ್ಟು ಮಾಡಿಕೊಂಡರು.


 
ಮುಂಬೈ ನಾಯಕನನ್ನು ಕರೆದು ಮಾತನಾಡಿಸಿದ ಮೇಲೆ ರವಿ ಶಾಸ್ತ್ರಿ ಪಂದ್ಯ ಪುರುಷ ಯಾರೆಂದು ಘೋಷಿಸಬೇಕಿತ್ತು. ಅಸಲಿಗೆ ಈ ಕಾರ್ಯಕ್ರಮ ಇರುವುದೇ ಇದಕ್ಕೆ. ಆದರೆ ಆ ಕೆಲಸ ಮಾಡುವುದನ್ನು ಮರೆತ ರವಿ ನಗೆಪಾಟಲಿಗೀಡಾದರು.

 
ನಾಯಕನನ್ನು ಮಾತನಾಡಿಸಿದ ಮೇಲೆ ಥ್ಯಾಂಕ್ಯೂ, ಗುಡ್ ನೈಟ್ ಹೇಳುತ್ತಿರುವುದನ್ನು ನೋಡಿ ಮೈದಾನದಲ್ಲಿದ್ದವರು ಅರೆ ಗಳಿಗೆ ಬಾಯಿ ಬಿಟ್ಟುಕೊಂಡು ನೋಡಿದರಲ್ಲದೆ, ಪಕ ಪಕನೆ ನಕ್ಕುಬಿಟ್ಟರು. ಆಗ ತಮ್ಮ ತಪ್ಪಿನ ಅರಿವಾಗಿ ರವಿ ಶಾಸ್ತ್ರಿ ಸಾವರಿಸಿಕೊಂಡು ಪಂದ್ಯ ಪುರುಷನ ಹೆಸರು ಘೋಷಣೆ ಮಾಡಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ