ತವರಿನಲ್ಲಿ ಆರ್`ಸಿಬಿಗೆ ಅಗ್ನಿ ಪರೀಕ್ಷೆ: ಹೈದ್ರಾಬಾದ್ ವಿರುದ್ಧ ಚಿನ್ನಸ್ವಾಮಿಯಲ್ಲಿ ಸೆಣೆಸಾಟ

ಮಂಗಳವಾರ, 25 ಏಪ್ರಿಲ್ 2017 (10:03 IST)
ಬೆಂಗಳೂರಿನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದ್ರಾಬಾದ್ ನಡುವೆ ಮಹತ್ವದ ಪಂದ್ಯ ನಡೆಯುತ್ತಿದೆ. 7 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು, 5ರಲ್ಲಿ ಸೋಲುಂಡಿರುವ ಆರ್ಸಿಬಿ ಪ್ಲೇಆಫ್ಸ್ ದೃಷ್ಟಿಯಿಂದ ಈ ಪಂದ್ಯ ಗೆಲ್ಲಲೇಬೇಕಿದೆ. ಆರ್ಸಿಬಿಯ ಮುಂದಿನ 3 ಪಂದ್ಯಗಳು ತವರಿನಲ್ಲೇ ನಡೆಯುತ್ತಿದ್ದು, ಮೂರೂ ಪಂದ್ಯಗಳನ್ನ ಉತ್ತಮ ರನ್ ರೇಟ್`ನಿಂದ ಗೆದ್ದರೆ ಪ್ಲೇಆಫ್ಸ್`ಗೆ 4ನೇ ತಂಡವಾಗಿ ಹೋಗುವ ಅವಕಾಶ ಸಿಕ್ಕರೂ ಸಿಗಬಹುದು.

ವಿರಾಟ್ ಕೊಹ್ಲಿ, ಗೇಲ್, ಡಿವಿಲಿಯರ್ಸ್`ರಂತಹ ವಿಶ್ವಶ್ರೇಷ್ಠ ಆಟಗಾರರಿದ್ದರೂ ಐಪಿಎಲ್ ಅಂಕಪಟ್ಟಿಯಲ್ಲಿ ತಂಡ ಕೊನೆಯ ಸ್ಥಾನದಲ್ಲಿದೆ. ಒಂದೊಂದು ಪಂದ್ಯ ಬಿಟ್ಟರೆ ಗೇಲ್, ಎಬಿಡಿಯಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದೇ ಆಟ ಮುಂದುವರೆದರೆ ಇವತ್ತೇ ಆರ್ಸಿಬಿಯ ಪ್ಲೇಆಫ್ಸ್ ಕನಸು ಕಮರಿಹೋಗುತ್ತೆ. ಪುಣೆ ಮತ್ತು ಕೋಲ್ಕತ್ತಾ ವಿರುದ್ಧ ಎರಡೂ ಪಂದ್ಯಗಳನ್ನ ಗೆಲ್ಲಬಹುದಾದ ಸ್ಥಾನದಲ್ಲಿದ್ದ ಆರ್ಸಿಬಿ ಪಂದ್ಯವನನ್ನ ಕೈಚೆಲ್ಲಿದೆ. ಕಳೆದ ಪಂದ್ಯದಲ್ಲಿ 49 ರನ್`ಗೆ ಆಲೌಟ್ ಆಗುವ ಮೂಲಕ 82 ರನ್`ಗಳ ಹೀನಾಯ ಸೋಲು ಅಭಿಮ಻ನಿಗಳಿಗೆ ಅರಗಿಸಿಕೊಳ್ಲಲಾಗುತ್ತಿಲ್ಲ.

7ರಲ್ಲಿ 4 ಪಂದ್ಯ ಗೆದ್ದಿರುವ ಸನ್ ರೈಸರ್ಸ್ ಹೈದ್ರಾಬಾದ್ ಆರ್ಸಿಬಿಯ ವಿರುದ್ಧದ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ತಾನಕ್ಕೇರುವ ತವಕದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಗೆ ಸೋಲುಣಿಸಿದ ಹೈದ್ರಾಬಾದ್ ಪ್ರಬಲ ಪೈಪೋಟಿ ಒಡ್ಡಲಿದೆ. ಅನುಭವಿ ಬೌಲಿಂಗ್ ಪಡೆ, ಸಮತೋಲಿತ ಬ್ಯಾಟಿಂಗ್, ಯುವಿ, ಭುವಿ, ವಾರ್ನರ್, ವಿಲಿಯಮ್ಸನ್`ರಂತಹ ಮ್ಯಾಚ್ ವಿನ್ನರ್`ಗಳ ಬಲವಿದೆ.

ವೆಬ್ದುನಿಯಾವನ್ನು ಓದಿ