ಇಂಧೋರ್`ನಲ್ಲಿ ಪಂಜಾಬ್-ಆರ್`ಸಿಬಿ ಬಿಗ್ ಫೈಟ್: ದಾಖಲೆಗೆ ಸಜ್ಜಾದ ಕ್ರಿಸ್ ಗೇಲ್

ಸೋಮವಾರ, 10 ಏಪ್ರಿಲ್ 2017 (16:40 IST)
ಇಂಧೋರ್`ನಲ್ಲಿಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್  ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್`ಸಿಬಿಯ ಮ್ಯಾಚ್ ವಿನ್ನರ್`ಗಳಾದ ಎಬಿಡಿವಿಲಿರ್ಸ್ ಮತ್ತು ಕೊಹ್ಲಿ ವಾಪಸ್ ಆಗುವ ನಿರೀಕ್ಷೆ ಇದ್ದು, ಹಾಗೇನಾದರೂ ಆದಲ್ಲಿ ಪಂಜಾಬ್ ವಿರುದ್ಧ ರನ್ ಮಳೆ ಹರಿಯಲಿದೆ.
 

ಮೊದಲ ಪಂದ್ಯ ಸೋತು 2ನೇ ಪಂದ್ಯ ಗೆದ್ದಿರುವ ಆರ್`ಸಿಬಿ ಗೆಲುವಿನ ಲಯಕ್ಕೆ ಮರಳಿದ್ದು, ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸುವ ಉತ್ಸಾಹದಲ್ಲಿದೆ. ಇತ್ತ, ಮೊದಲ ಪಂದ್ಯದಲ್ಲಿ ಪುಣೆಯನ್ನ ಸೋಲಿಸಿರುವ ಪ್ರೀತಿ ಹುಡುಗರು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಇದುವರೆಗೆ 18 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, 1ಒರಲ್ಲಿ ಪಂಜಾಬ್ ಮತ್ತು 8ರಲ್ಲಿ ಆರ್`ಸಿಬಿ ಗೆದ್ದಿದೆ.

ದಾಖಲೆಯತ್ತ ಗೇಲ್: ಎರಡೂ ಪಂದ್ಯಗಳಲ್ಲಿ ನಿರಾಸೆ ಮೂಡಿಸಿರುವ ಗೇಲ್ ಈ ಪಂದ್ಯದಲ್ಲಾದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಅಡಲಿ ಎಂಬುದು ಅಭಿಮಾನಿಗಳ ನಿರೀಕ್ಷೆ. ಈ ಮಧ್ಯೆ, ಟಿ-20 ಇತಿಹಾಸದಲ್ಲೇ ಮೈಲುಗಲ್ಲಾಗುವಂಥ ದಾಖಲೆ ಬರೆಯುವತ್ತ ಗೇಲ್ ಮುನ್ನುಗ್ಗುತ್ತಿದ್ದಾರೆ. ಒಟ್ಟಾರೆ ಟಿ-20 ಕ್ರಿಕೆಟ್`ನಲ್ಲಿ 9975 ರನ್ ಗಳಿಸಿರುವ ಗೇಲ್ ಇನ್ನೂ ಕೇವಲ 25 ರನ್ ಗಳಿಸಿದರೆ ಟಿ-20ಯಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ