ಐಪಿಎಲ್ ಆಟಗಾರರಿದ್ದ ಹೋಟೆಲ್`ನಿಂದಲೇ ಬುಕ್ಕಿಗಳು ಅರಸ್ಟ್.. ಬುಕ್ಕಿ ಹೇಳಿದ ಆಟಗಾರರು ಯಾರು..?

ಶುಕ್ರವಾರ, 12 ಮೇ 2017 (19:19 IST)
ಪ್ಲೇಆಫ್ಸ್ ಸನಿಹದಲ್ಲಿರುವ ಐಪಿಎಲ್ ಸೀಸನ್-10 ಸರಣಿಗೆ ಮ್ಯಾಚ್ ಫಿಕ್ಸಿಂಗ್ ಕಳಂಕ ಅಂಟಿಕೊಂಡಿದೆ. ಗುರುವಾರ ಕಾನ್ಪುರದಲ್ಲಿ ಗುಜರಾತ್ ಲಯನ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರರು ತಂಗಿದ್ದ ಹೋಟೆಲಿನಲ್ಲೇ ಇದ್ದ ಮೂವರು ಬುಕ್ಕಿಗಳನ್ನ ಪೊಲೀಸರು ಬಂಧಿಸಿದ್ದಾರೆ.
 

ವಿಚಾರಣೆ ವೇಳೆ ಬುಕ್ಕಿಗಳು ಮೂವರು ಗುಜರಾತ್ ಲಯನ್ಸ್ ಆಟಗಾರರ ಹೆಸರುಗಳನ್ನೂ ಬಾಯ್ಬಿಟ್ಟಿದ್ದು, ಅವರನ್ನೂ ವಿಚಾರಣೆಗೊಳಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬುಕ್ಕಿಗಳ ಬಂಧನದ ಬಳಿಕ ಶ್ರೀಮಂತ ಐಪಿಎಲ್ ಸರಣಿಯಲ್ಲಿ ಬೆಟ್ಟಿಂಗ್ ನಡೆದಿರುವ ಅನುಮಾನ ಮೂಡಿಸಿದ್ದು, ಬಿಸಿಸಿಐ ಅಕ್ಷರಶಃ ಬೆಚ್ಚಿ ಬಿದ್ದಿದೆ.

ಬಂಧಿತರಿಂದ 40.90 ಲಕ್ಷ ರೂ. ಹಣ ಮತ್ತು 5 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನ ಥಾಣೆಯ ಉದ್ಯಮಿ ರಮೇಶ್ ನಯನ್ ಶಾ, ರಮೇಶ್ ಕುಮಾರ್ ಮತ್ತು ವಿಕಾಸ್ ಚೌಹಾಣ್ ಎಂದು ಗುರ್ತಿಸಲಾಗಿದೆ.
ಕಾನ್ಪುರದ ಏಕೈಕ 5 ಸ್ಟಾರ್ ಹೋಟೆಲ್ ಲ್ಯಾಂಡ್ ಮಾರ್ಕ್`ನ 17ನೇ ಮಹಡಿಯ ಕೊಠಡಿಯಲ್ಲಿ ಶಾ ಮತ್ತು ವಿಕಾಸ್ ಅವರನ್ನ ಬಂಧಿಸಲಾಗಿದ್ದು, ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ರಮೇಶ್ ಬಂಧನವಾಗಿದೆ. ಗುಜರಾತ್ ಸೋಲುತ್ತೆ ಎಂದು ರಮೇಶ್ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ