IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video
ನಿನ್ನೆಯ ಪಂದ್ಯದಲ್ಲಿ ಇಬ್ಬರೂ ಶತಕ ಗಳಿಸಿದ್ದರು. ಜೈಸ್ವಾಲ್ 101 ರನ್ ಗಳಿಸಿ ಔಟಾದರೆ ಕ್ಯಾಪ್ಟನ್ ಗಿಲ್ 127 ರನ್ ಗಳಿಸಿ ಇನ್ನೂ ಕ್ರೀಸ್ ನಲ್ಲಿದ್ದಾರೆ. ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ನಿನ್ನೆಯ ದಿನದಾಟದಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಚೆಂಡನ್ನು ತಳ್ಳಿ ಸಿಂಗಲ್ಸ್ ಗಾಗಿ ಓಡಲು ಹೊರಟರು. ಆದರೆ ಬಾಲ್ ಹತ್ತಿರದಲ್ಲೇ ಇದ್ದಿದ್ದರಿಂದ ಗಿಲ್ ಬೇಡ ಬೇಡ ಎಂದು ಕಿರುಚಾಡಿದರು.
ಬಳಿಕ ಜೈಸ್ವಾಲ್ ಏನು ಭೈಯಾ.. ನಂಗೆ ಸ್ವಲ್ಪ ಹೇಳ್ತಾನೇ ಇರಬೇಕು ನೀನು ರನ್ ಗಾಗಿ ಓಡಬೇಡ ಎಂದು. ನಂಗೆ ಪ್ರತೀ ಬಾಲ್ ಹೊಡೆದ ಮೇಲೂ ಓಡುವ ಅಭ್ಯಾಸವಿದೆ ಎಂದು ನಾನ್ ಸ್ಟ್ರೈಕರ್ ತುದಿಯಲ್ಲಿರುವ ಗಿಲ್ ಗೆ ಹೇಳುತ್ತಾರೆ. ಇಲ್ಲ ಓಡಬೇಡ ಅಷ್ಟೇ ಎಂದು ಗಿಲ್ ಹೇಳುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.