ನವದೆಹಲಿ: ಆಸ್ಟ್ರೇಲಿಯಾ ಸರಣಿ ಮುಗಿದ ಮೇಲೆ ಇನ್ನು ಮುಂದೆ ಆಸೀಸ್ ಕ್ರಿಕೆಟಿಗರ ಜತೆ ಸ್ನೇಹ ಸಾಧ್ಯವಿಲ್ಲ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈಗ ಜ್ಞಾನೋದಯವಾಗಿದೆ.
ಈ ಹೇಳಿಕೆಗೆ ಕ್ರಿಕೆಟ್ ಜಗತ್ತಿನ ದಿಗ್ಗಜರು ಬೇಸರ ವ್ಯಕ್ತಪಡಿಸಿದ ನಂತರ ತನ್ನ ತಪ್ಪು ತಿದ್ದುಕೊಂಡಿರುವ ಕೊಹ್ಲಿ ಟ್ವಿಟರ್ ನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ‘ಪಂದ್ಯ ಮುಗಿದ ನಂತರ ನನ್ನ ಹೇಳಿಕೆ ಹಾದಿ ತಪ್ಪಿ ಬೇರೆಯದೇ ಅರ್ಥ ಪಡೆಯಿತು. ನಾನು ಇಡೀ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಬಗ್ಗೆ ಈ ಅಭಿಪ್ರಾಯ ಹೇಳಲಿಲ್ಲ’ ಎಂದು ತಿದ್ದಿಕೊಂಡಿದ್ದಾರೆ.
ಕೆಲವು ಆಸ್ಟ್ರೇಲಿಯನ್ ಕ್ರಿಕೆಟಿಗರ ಜತೆಗೆ ನನಗೆ ಉತ್ತಮ ಬಾಂಧವ್ಯವಿದೆ. ಅದು ಮುಂದೆಯೂ ಮುಂದುವರಿಯಲಿದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ನಾಯಕತ್ವದ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಮೂಲದ ಕೆಲವು ಆಟಗಾರರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ