ವಿರಾಟ್ ಕೊಹ್ಲಿ ಒಂದು ದಿನದ ಸಂಭಾವನೆ ಏರಿಕೆ! ಅದೆಷ್ಟು ಗೊತ್ತಾ?!

ಶುಕ್ರವಾರ, 31 ಮಾರ್ಚ್ 2017 (12:03 IST)
ನವದೆಹಲಿ: ವಿರಾಟ್ ಕೊಹ್ಲಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕಾಗಿಯೇ ಈ ಹಾಟ್ ಕ್ರಿಕೆಟಿಗ ತನ್ನ ಪ್ರಚಾರ ರಾಯಭಾರಿ ಫೀಸ್ ನ್ನೂ ದುಪ್ಪಟ್ಟುಗೊಳಿಸಿದ್ದಾರೆ. ಇನ್ನು ಮುಂದೆ ಕೊಹ್ಲಿ ದಿನವೊಂದಕ್ಕೆ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?!

 

ಬರೋಬ್ಬರಿ 5 ಕೋಟಿ! ಇದು ಭಾರತೀಯ ಸೆಲೆಬ್ರಿಟಿಗಳ ಪೈಕಿಯೇ ಅತೀ ಹೆಚ್ಚು.  ಇದಕ್ಕಿಂತ ಮೊದಲು ಕೊಹ್ಲಿ ಪ್ರತಿ ದಿನಕ್ಕೆ 2.5 ಕೋಟಿಯಿಂದ 4 ಕೋಟಿ ರೂ. ವರೆಗೆ ಚಾರ್ಜ್ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಪೆಪ್ಸಿ ಕೊ. ಸಂಸ್ಥೆಯೊಂದಿಗೆ ರಾಯಭಾರ ಒಪ್ಪಂದ ನವೀಕರಿಸಿರುವ ಕೊಹ್ಲಿ ಹೊಸ ಫೀಸ್ ಪ್ರಕಟಿಸಿದ್ದಾರೆ.

 
ಒಪ್ಪಂದ ಮಾಡಿಕೊಂಡ ಸಂಸ್ಥೆಗಳು, ಜಾಹೀರಾತು ಚಿತ್ರೀಕರಣಕ್ಕೆ ಅಥವಾ ತಮ್ಮ ಉತ್ಪನ್ನ ಪ್ರಚಾರ ಮಾಡುವ ಯಾವುದೇ ಕಾರ್ಯಕ್ರಮಗಳಿಗೆ ಬರ ಹೇಳಿದರೆ, ಕೊಹ್ಲಿಗೆ ಇಷ್ಟು ದೊಡ್ಡ ಮೊತ್ತ ಕೊಡಬೇಕಾಗುತ್ತದೆ. ಸದ್ಯಕ್ಕೆ ಭಾರತೀಯ ಸೆಲೆಬ್ರಿಟಿಗಳ ಪೈಕಿ ಯಾರೂ ಕೊಹ್ಲಿಯಷ್ಟು ದುಬಾರಿಯಲ್ಲ ಎನ್ನುತ್ತಿವೆ ಮಾರುಕಟ್ಟೆ ಮೂಲಗಳು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ