ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ! ಆರ್ ಸಿಬಿಗೆ ಸಂಭ್ರಮ!

ಗುರುವಾರ, 13 ಏಪ್ರಿಲ್ 2017 (10:39 IST)
ಬೆಂಗಳೂರು: ಭುಜದ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಇದರಿಂದಾಗಿ ಸೋಲಿನ ಸುಳಿಯಲ್ಲಿರುವ ಆರ್ ಸಿಬಿ ಈಗ ಖುಷಿಯಲ್ಲಿದೆ.

 

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಕೊಹ್ಲಿ ಇದೀಗ ಫಿಟ್ ಆಗಿರುವುದಾಗಿ ಬಿಸಿಸಿಐ ಪ್ರಕಟಿಸಿದೆ. ಹೀಗಾಗಿ ನಾಳೆ ನಡೆಯಲಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಡುವುದು ಪಕ್ಕಾ ಆಗಿದೆ.

 
ಆರ್ ಸಿಬಿ ಸದಸ್ಯರೊಂದಿಗೆ ಫೀಲ್ಡಿಂಗ್ ಅಭ್ಯಾಸ ನಡೆಸಿದ ವಿರಾಟ್, ಸಂಪೂರ್ಣ ತಯಾರಾಗುತ್ತಿದ್ದಾ.ರೆ ಕೊಹ್ಲಿ ಆಗಮನದ ಸುದ್ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರವಲ್ಲ ಅಭಿಮಾನಿಗಳೂ ಖುಷ್ ಆಗಲಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ