ಮುಂಬೈ ವಿರುದ್ಧದ ಪಂದ್ಯಕ್ಕೆ ಬರುತ್ತಾರೆ ಕೊಹ್ಲಿ..?

ಮಂಗಳವಾರ, 11 ಏಪ್ರಿಲ್ 2017 (18:26 IST)

ವಿರಾಟ್ ಕೊಹ್ಲಿ.. ಭಾರತ ಕ್ರಿಕೆಟ್ ಕಂಡ ಅಗ್ರೆಸ್ಸಿವ್ ಬ್ಯಾಟ್ಸ್ ಮನ್. ತಮ್ಮ ತಂಡವನ್ನ ಬಿಟ್ಟು ಯಾವುತ್ತೂ ಹೊರಗಿರಲು ಇಷ್ಟಪಡದ ವಿರಾಟ್ ಆದಷ್ಟು ಬೇಗ ಆರ್`ಸಿಬಿಗೆ ಸೇರಿಕೊಳ್ಳಲು ತವಕಿಸುತ್ತಾರೆ. ಕೊಹ್ಲಿ ಇನ್ಸ್ಟಾಗ್ರಾಮ್`ನಲ್ಲಿ ಶೇರ್ ಮಾಡಿರುವ ವಿಡಿಯೊ ಈ ಮಾತನ್ನ ಸಾರಿ ಸಾರಿ ಹೇಳುತ್ತಿದ್ದೆ

 

ಜಿಮ್`ನಲ್ಲಿ ವೆಟ್ ಲಿಫ್ಟಿಂಗ್ ಮೂಲಕ ಬೆವರುಹರಿಸುತ್ತಿರುವ ಫೋಟೋವನ್ನ ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಬಲಭುಜಕ್ಕೆ ಗಾಯ ಮಾಡಿಕೊಂಡಿದ್ದ ಕೊಹ್ಲಿ ಚೇತರಿಸಿಕೊಂಡಿರುವುದು ಈ ವಿಡಿಯೋದಿಂದ ಸ್ಪಷ್ಟವಾಗುತ್ತಿದೆ. ಏಪ್ರಿಲ್ 14ರ ಮುಂಬೈ ವಿರುದ್ದ ಪಂದ್ಯಕ್ಕೆ ಕೊಹ್ಲಿ ವಾಪಸ್ ಆಗುವರೇ ಎಂಬ ಅಭಿಮಾನಿಗಳ ಆಸೆಗೆ ಈ ವಿಡಿಯೋ ಪುಷ್ಠಿ ನೀಡಿದೆ.

 

ಕೊಹ್ಲಿ ಬೇಗ ಚೇತರಿಸಿಕೊಂಡು ಫೀಲ್ಡಿಗಳಿಯಲಿ ಎಂಬುದು ಅಭಿಮಾನಿಗಳ ಹರಕೆಯಾಗಿದೆ. ಮುಂಬೈ ವಿರುದ್ಧದ ಪಂದ್ಯದ ಹೊತ್ತಿಗೆ ಕೊಹ್ಲಿ ತಂಡ ಸೇರಿಕೊಂಡರೆ ರನ್ ಮಳೆ ಹರಿಯಲಿದೆ.

ವೆಬ್ದುನಿಯಾವನ್ನು ಓದಿ