ಮುಂಬೈ: ಐಪಿಎಲ್ ಎಂದರೆ ಎಲ್ಲರೂ ಬಾಯಿ ಬಿಡುವವರೇ. ತಮ್ಮ ರಾಷ್ಟ್ರದ ಪರ ಆಡುವುದನ್ನು ಬೇಕಾದರೂ ಬಿಟ್ಟೇನು, ಐಪಿಎಲ್ ಬಿಡೆ ಎಂದು ಕೆಲವು ಕ್ರಿಕೆಟಿಗರು ಬರುವುದಿದೆ. ಇದಕ್ಕೆ ಕಾರಣವೇನು? ಈ ವರ್ಷದ ದುಬಾರಿ ಐಪಿಎಲ್ ಆಟಗಾರ ಬೆನ್ ಸ್ಟೋಕ್ಸ್ ಹೇಳಿದ್ದಾರೆ ನೋಡಿ.
‘ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಅಥವಾ ಐಪಿಎಲ್ ನಲ್ಲಿ ಸಿಗುವಷ್ಟು ಅನುಭವ ಬೇರೆಲ್ಲೂ ಸಿಗದು. ಜಗತ್ತಿನ ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಅವಕಾಶ ನಿಮ್ಮದಾಗುತ್ತದೆ. ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೊಂದಿಲ್ಲ’ ಎಂದು ಬೆನ್ ಹೇಳಿಕೊಂಡಿದ್ದಾರೆ.
ಪುಣೆ ತಂಡದ ಪರ ಆಡಲಿರುವ ಬೆನ್ ಸ್ಟೋಕ್ಸ್ ಕ್ರಿಕೆಟ್ ದಿಗ್ಗಜರಾದ ಧೋನಿ, ಸ್ಟೀವ್ ಸ್ಮಿತ್, ರವಿಚಂದ್ರನ್ ಅಶ್ವಿನ್ ಜತೆಗೆ ಆಡಲಿದ್ದಾರೆ. ಇದರಿಂದ ತಮಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ