ಐಪಿಎಲ್: ಒಂದೇ ಗೆಲುವು, ಮತ್ತೆಲ್ಲಾ ಸೋಲು! ಅಯ್ಯೋ.. ಆರ್ ಸಿಬಿಯೇ?!

ಮಂಗಳವಾರ, 16 ಏಪ್ರಿಲ್ 2019 (07:07 IST)
ಬೆಂಗಳೂರು: ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸೋಲುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಲೆಕ್ಕ ಏಳಕ್ಕೇರಿದೆ.


ಕಳೆದ ಪಂದ್ಯದಲ್ಲಿ ಕೂಟದ ಮೊದಲ ಗೆಲುವು ಸಾಧಿಸಿದ್ದ ಆರ್ ಸಿಬಿ ನಿನ್ನೆ ತವರಿನಲ್ಲಿ ಗೆಲ್ಲಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳಿಂದ ಆರ್ ಸಿಬಿಯನ್ನು ಮಣ್ಣು ಮುಕ್ಕಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಎಬಿಡಿ ವಿಲಿಯರ್ಸ್ (75) ಮತ್ತು ಮೊಯಿನ್ ಅಲಿ (50)  ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮಾತನಾಡಿದ ಮುಂಬೈ 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 175 ರನ್ ಮಾಡುವ ಮೂಲಕ ಗೆಲುವಿನ ನಗೆ ಬೀರಿತು. ಅತ್ತ ಆರ್ ಸಿಬಿ ತವರಿನ ಪ್ರೇಕ್ಷಕರಿಗೆ ಮತ್ತೆ ನಿರಾಸೆ ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ