ಐಪಿಎಲ್: ಆರ್ ಸಿಬಿಗೆ ಥ್ರಿಲ್ಲಿಂಗ್ ಗೆಲುವು
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭದಲ್ಲಿ ಕುಸಿತದ ಹಾದಿಯಲ್ಲಿತ್ತು. ತೀರಾ ಹೀನಾಯ ಸೋಲು ಕಾಣುತ್ತದೆ ಎಂದಾಗ ನಾಯಕನ ಆಟವಾಡಿದ ಧೋನಿ 48 ಎಸೆತಗಳಲ್ಲಿ 84 ರನ್ ಸಿಡಿಸಿ ಗೆಲುವಿನ ಅಂಚಿಗೆ ತಂದು ನಿಲ್ಲಿಸಿದರು. ಆದರೆ ಅಂತಿಮ ಎಸೆತದಲ್ಲಿ ಬೆಸ್ಟ್ ಫಿನಿಶರ್ ಧೋನಿ ಉಮೇಶ್ ಯಾದವ್ ಎಸೆತದಲ್ಲಿ ಔಟಾದರು. ಆಗ ಚೆನ್ನೈ ಗೆಲುವಿಗೆ ಒಂದೇ ರನ್ ದೂರದಲ್ಲಿತ್ತು! ಈ ಮೂಲಕ ಬೆಂಗಳೂರಿಗೆ ರೋಚಕ ಜಯ ದಾಖಲಾಯ್ತು.