ಐಪಿಎಲ್: ರಾಜಸ್ಥಾನ್ ರಾಯಲ್ಸ್ ನಾಯಕತ್ವದಿಂದ ಅಜಿಂಕ್ಯಾ ರೆಹಾನೆಗೆ ಕೊಕ್

ಭಾನುವಾರ, 21 ಏಪ್ರಿಲ್ 2019 (13:35 IST)
ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇದುವರೆಗೆ ನಾಯಕರಾಗಿ ಮುನ್ನಡೆಸಿದ್ದ ಅಜಿಂಕ್ಯಾ ರೆಹಾನೆ ಅವರಿಗೆ ಕೊಕ್ ನೀಡಲಾಗಿದೆ.

 
ರೆಹಾನೆ ಸ್ಥಾನಕ್ಕೆ ಆಸ್ಟ್ರೇಲಿಯಾ ಮೂಲದ ಸ್ಟೀವ್ ಸ್ಮಿತ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಐಪಿಎಲ್ ನಲ್ಲಿ ರಾಜಸ್ಥಾನ ತಂಡದ ನಿರಾಶಾದಾಯಕ ಪ್ರದರ್ಶನದಿಂದ ಬೇಸತ್ತು ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ.

ಅಂಕ ಪಟ್ಟಿಯಲ್ಲಿ ಸದ್ಯಕ್ಕೆ ರಾಜಸ್ಥಾನ್ ಏಳನೇ ಸ್ಥಾನದಲ್ಲಿದೆ. ಈಗ ಆಡಿದ ಏಳು ಪಂದ್ಯಗಳಿಂದ ಎರಡೇ ಪಂದ್ಯ ಗೆದ್ದಿರುವ ರಾಜಸ್ಥಾನ್ ಗೆ ಮುಂದಿನ ಹಂತಕ್ಕೆ ಏರಲು ಉಳಿದ ಆರು ಪಂದ್ಯಗಳ ಪೈಕಿ ಐದನ್ನು ಗೆಲ್ಲುವ ಅನಿವಾರ್ಯತೆಯಿದೆ. ಈ ಸವಾಲನ್ನು ಹೊಸ ನಾಯಕ ಹೇಗೆ ಎದುರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ