ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಈ ಬೌಲರ್ ನಾಲ್ಕು ಓವರ್ ಗೆ ನೀಡಿದ ರನ್ ಕೇಳಿದರೆ ಗಾಬರಿಯಾಗುತ್ತೀರಿ!

ಮಂಗಳವಾರ, 30 ಏಪ್ರಿಲ್ 2019 (09:11 IST)
ಹೈದರಾಬಾದ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಜೀಬ್ ಉರ್ ರೆಹಮಾನ್ ತಮ್ಮ ನಾಲ್ಕು ಓವರ್ ಗಳ ಕೋಟಾದಲ್ಲಿ ನೀಡಿದ ರನ್ ಇದೀಗ ದಾಖಲೆಯಾಗಿದೆ.


ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮುಜೀಬ್ ತಮ್ಮ ನಾಲ್ಕು ಓವರ್ ಗಳ ಕೋಟಾದಲ್ಲಿ ಬರೋಬ್ಬರಿ 66 ರನ್ ನೀಡಿದ್ದಾರೆ. ಇದು ಐಪಿಎಲ್ ನಲ್ಲಿ ದಾಖಲೆಯಾಗಿದೆ.

ಇದುವರೆಗೆ ಯಾರೂ ನಾಲ್ಕು ಓವರ್ ಗಳಲ್ಲಿ ಇಷ್ಟೊಂದು ರನ್ ನೀಡಿ ದುಬಾರಿಯಾಗಿದ್ದು ಇಲ್ಲ. ಅದೂ ಒಂದೇ ಒಂದು ವಿಕೆಟ್ ಇಲ್ಲದೇ. ಈ ಪಂದ್ಯವನ್ನು ಹೈದರಾಬಾದ್ 45 ರನ್ ಗಳಿಂದ ಗೆದ್ದುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ