ಐಪಿಎಲ್ ಆಡುತ್ತಿರುವ ಆರ್ ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ

ಗುರುವಾರ, 11 ಏಪ್ರಿಲ್ 2019 (08:55 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಆಡುತ್ತಿರುವ ಕ್ರಿಕೆಟಿಗ ಪಾರ್ಥಿವ್ ಪಟೇಲ್ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೇ ಎದ್ದಿದೆ.


ಒಂದು ಕಡೆಯಲ್ಲಿ ತಮ್ಮ ತಂಡದ ಸತತ ಸೋಲು, ಇನ್ನೊಂದು ಕಡೆಗೆ ಪಾರ್ಥಿವ್ ತಂದೆ ಬ್ರೈನ್ ಹೆಮರೇಡ್ಜ್ ಗೆ ತುತ್ತಾಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದಾರೆ. ಹೀಗಾಗಿ ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಮಾಡಿಕೊಳ್ಳಲು ಅವರಿಗೆ ಕಷ್ಟವಾಗುತ್ತಿದೆಯಂತೆ.

ಪ್ರತೀ ಬಾರಿ ಪಂದ್ಯ ಮುಗಿದ ಮೇಲೆ ಪೆವಿಲಿಯನ್ ಗೆ ಹೋದಾಗ ತಕ್ಷಣ ಮೊಬೈಲ್ ತೆಗೆದು ನೋಡುತ್ತಾರಂತೆ ಪಾರ್ಥಿವ್. ಅಲ್ಲಿ ತನ್ನ ತಂದೆಯ ಕುರಿತಾಗಿ ಯಾವುದೇ ಕೆಟ್ಟ ಸುದ್ದಿ ಬಂದಿರಲ್ಲ ಎಂಬ ಪ್ರಾರ್ಥನೆಯೊಂದಿಗೇ ಮೊಬೈಲ್ ತೆರೆಯುತ್ತಾರಂತೆ. ಇವೆಲ್ಲಾ ಜಂಜಾಟಗಳ ಮಧ್ಯೆ ತನಗೆ ಕ್ರಿಕೆಟ್ ನಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ ಎಂದು ಪಾರ್ಥಿವ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ