ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಬಿಗ್ ಶಾಕ್! ರೋಹಿತ್ ಶರ್ಮಾಗೆ ಗಾಯ

ಬುಧವಾರ, 10 ಏಪ್ರಿಲ್ 2019 (11:17 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಆಯ್ಕೆ ಮಾಡುವ ಮೊದಲೇ ರೋಹಿತ್ ಶರ್ಮಾ ರೂಪದಲ್ಲಿ ದೊಡ್ಡ ಶಾಕ್ ಸಿಕ್ಕಿದೆ.


ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಶರ್ಮಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ.

ತೀವ್ರ ನೋವಿನಿಂದ ನರಳುತ್ತಿದ್ದ ರೋಹಿತ್ ಶರ್ಮಾ ಫಿಸಿಯೋ ನಿತಿನ್ ಪಟೇಲ್ ಸಹಾಯದಿಂದ ಪೆವಿಲಿಯನ್ ಗೆ ಮರಳಿದರು. ರೋಹಿತ್ ಗಾಯದ ಗಂಭೀರತೆ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಮುಖ ಆಟಗಾರರಾಗಿರುವ ರೋಹಿತ್ ಶರ್ಮಾ ವಿಶ್ವಕಪ್ ಗೆ ಮೊದಲು ಚೇತರಿಸದಿದ್ದರೆ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ