ಐಪಿಎಲ್ 13: ಪ್ರಬಲ ಡೆಲ್ಲಿಗೆ ಇಂದು ಹೈದರಾಬಾದ್ ಸವಾಲು

ಮಂಗಳವಾರ, 29 ಸೆಪ್ಟಂಬರ್ 2020 (09:49 IST)
ದುಬೈ: ಐಪಿಎಲ್ 13 ರಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ಶ್ರೇಯಸ್ ಐಯರ್ ನೇತೃತ್ವದ ಯಂಗ್ ಡೆಲ್ಲಿ ಕ್ಯಾಪಿಟಲ್ಸ್ ಗೆ ಇಂದು ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ಸವಾಲಾಗಲಿದೆ.


ರಿಕಿ ಪಾಂಟಿಂಗ್ ಚಾಣಕ್ಷ್ಯ ಕೋಚಿಂಗ್, ಶ್ರೇಯಸ್ ಐಯರ್, ರಿಷಬ್ ಪಂತ್, ಪೃಥ್ವಿ ಶಾ ಅವರಂತಹ ಯಂಗ್ ಗನ್ ಗಳ ಡೆಲ್ಲಿ ಈಗ ಟೂರ್ನಿಯಲ್ಲಿ ಸತತ ಜಯದೊಂದಿಗೆ ಭರ್ಜರಿ ಉತ್ಸಾಹದಲ್ಲಿದೆ. ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಡೆಲ್ಲಿಗೆ ಈಗಾಗಲೇ ಸತತ ಸೋಲು ಕಂಡಿರುವ ಹೈದರಾಬಾದ್ ಸವಾಲಾಗಿದೆ. ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ಇಂದಾದರೂ ಗೆಲುವಿನ ಹಳಿಗೆ ಮರಳುತ್ತದೋ ಕಾದು ನೋಡಬೇಕು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ