ಐಪಿಎಲ್ 13: ರಾಜಸ್ಥಾನ್ ಗೆ ಶಾಕ್ ಕೊಟ್ಟ ಕೋಲ್ಕೊತ್ತಾ ನೈಟ್ ರೈಡರ್ಸ್
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಬಲಾಢ್ಯ ಬ್ಯಾಟಿಂಗ್ ಸುಲಭವಾಗಿ ಎದುರಾಳಿ ಮುಂದೆ ಶರಣಾಯಿತು. ರಾಜಸ್ಥಾನ್ ಪರ ಆರಂಭಿಕ ಜೋಸ್ ಬಟ್ಲರ್ 21, ಕೆಳ ಕ್ರಮಾಂಕದಲ್ಲಿ ಟಾಮ್ ಕರನ್ ಅಜೇಯ 54 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರದ್ದೂ ಒಂದಂಕಿ ಮೊತ್ತ. ಇದರೊಂದಿಗೆ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.