ಐಪಿಎಲ್ 13 ಆರಂಭವಾಗಿ ಕೇವಲ ಒಂದು ವಾರವಾಗಿದೆಯಷ್ಟೇ. ಹೀಗಾಗಿ ಈಗಲೇ ಈ ತಂಡವೇ ಚಾಂಪಿಯನ್ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದರೂ ಈ ಬಾರಿ ಚೆನ್ನೈ, ಮುಂಬೈ ಹೊರತಾಗಿ ಪಂಜಾಬ್, ಡೆಲ್ಲಿ, ರಾಜಸ್ಥಾನ್, ಆರ್ ಸಿಬಿ ಪ್ರಬಲ ಪೈಪೋಟಿಯೊಡ್ಡುತ್ತಿರುವುದು ನೋಡಿದರೆ ಈ ಬಾರಿ ಹೊಸ ಚಾಂಪಿಯನ್ ನ್ನು ನೋಡುವ ಅವಕಾಶ ಸಿಗಬಹುದು ಎನ್ನಬಹುದು.