ಐಪಿಎಲ್ 13: ಟಾಪರ್ ಮುಂಬೈಗೆ ಲಾಸ್ಟ್ ಬೆಂಚರ್ ಪಂಜಾಬ್ ಸವಾಲು

ಭಾನುವಾರ, 18 ಅಕ್ಟೋಬರ್ 2020 (10:07 IST)
ದುಬೈ: ಐಪಿಎಲ್ 13 ರಲ್ಲಿ ಇಂದು ಎರಡನೇ ಪಂದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ.

 
ಅಂಕಪಟ್ಟಿಯಲ್ಲಿ ಟಾಪರ್ ಆಗಿರುವ ಮುಂಬೈಗೆ ಕೊನೆಯ ಸ್ಥಾನದಲ್ಲಿರುವ ಪಂಜಾಬ್ ಸವಾಲು ನೀಡಲಿದೆ. ಈ ಪಂದ್ಯದ ವಿಶೇಷತೆ ಬ್ಯಾಟ್ಸ್ ಮನ್ ಗಳ ಕಾದಾಟ ಎನ್ನಬಹುದು. ಪಂಜಾಬ್ ನ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಪ್ರೇಕ್ಷಕರಿಗೆ ಆಕರ್ಷಣೆಯಾದರೆ, ಮುಂಬೈಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬ್ಯಾಟಿಂಗ್ ರಸದೌತಣ ನೀಡಲಿದೆ. ಹೀಗಾಗಿ ಈ ಬ್ಯಾಟಿಂಗ್ ಗುದ್ದಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಕಾದು ನೋಡಬೇಕು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ