ಐಪಿಎಲ್ 13: ಮುಂಬೈಗಿಂದು ರಾಜಸ್ಥಾನ್ ವಿರುದ್ಧ ಔಪಚಾರಿಕ ಪಂದ್ಯ

ಭಾನುವಾರ, 25 ಅಕ್ಟೋಬರ್ 2020 (09:34 IST)
ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಹಂತಕ್ಕೇರುವ ಕನಸು ಕ್ಷೀಣವಾಗಿರುವ ಹಿನ್ನಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಇಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಔಪಚಾರಿಕವಾಗಲಿದೆ.


ಈಗಾಗಲೇ ಅಗ್ರ ಸ್ಥಾನದಲ್ಲಿರುವ ಮುಂಬೈಗೆ ರಾಜಸ್ಥಾನ್ ಸುಲಭ ಸವಾಲಾಗಬಹುದು. ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ಸುಲಭ ಜಯ ಕಂಡಿತ್ತು. ರಾಜಸ್ಥಾನ್ ಗೆ ಹೋಲಿಸಿದರೆ ಮುಂಬೈ ಎಲ್ಲಾ ವಿಭಾಗದಲ್ಲೂ ಮುಂದಿದೆ. ಒಂದು ವೇಳೆ ರಾಜಸ್ಥಾನ್ ಗೆ ಗೆಲುವು ಸಾಧಿಸಬೇಕಾದರೆ ಬ್ಯಾಟ್ಸ್ ಮನ್ ಗಳು ಸ್ಪೋಟಿಸಲೇಬೇಕು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ