ಅಂಬರೀಶ್ ಹಾಡು ಹಾಡಿದ ಎಬಿಡಿ ವಿಲಿಯರ್ಸ್: ಸುಮಲತಾಗೆ ಖುಷಿಯೋ ಖುಷಿ

ಶನಿವಾರ, 24 ಅಕ್ಟೋಬರ್ 2020 (11:07 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರಂಪ್ ಕಾರ್ಡ್ ಆಗಿರುವ ದಕ್ಷಿಣ ಆಫ್ರಿಕಾ ಮೂಲದ ಎಬಿಡಿ ವಿಲಿಯರ್ಸ್ ಕನ್ನಡದ ಹಾಡೊಂದನ್ನು ಹಾಡುವ ವಿಡಿಯೋ ವೈರಲ್ ಆಗಿದೆ.


ಡ್ಯಾನಿಶ್ ಸೇಠ್ ಎಬಿಡಿ ಬಳಿ ರೆಬಲ್ ಸ್ಟಾರ್ ಅಂಬರೀಶ್ ಅವರ ‘ಮಂಡ್ಯದ ಗಂಡು’ ಹಾಡನ್ನು ಹಾಡಿಸುತ್ತಾರೆ. ಅವರು ಹಾಡುವ ಪರಿಗೆ ಖುಷಿಯಾದ ಸುಮಲತಾ ಈ ಬಾರಿ ಕಪ್ ನಮ್ದೇ ಎಂದಿದ್ದಾರೆ. ‘ಅಂಬರೀಶ್ ಅವರ ಫೇಮಸ್ ಹಾಡನ್ನು ಎಬಿಡಿ ತುಂಬಾ ಚೆನ್ನಾಗಿ ಹಾಡಿದ್ದಾರೆ. ಪದೇ ಪದೇ ಕೇಳಬೇಕೆನಿಸುತ್ತಿದೆ. ಈ ಸಲ ಕಪ್ ನಮ್ದೇ ಬಿಡಿ’ ಎಂದು ಸುಮಲತಾ ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ