ಧೋನಿ ಫಿಟ್ ಆಗಿಲ್ಲ, ಫಿಟ್ನೆಸ್ ಕೊಟ್ಟ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್

ಮಂಗಳವಾರ, 20 ಅಕ್ಟೋಬರ್ 2020 (11:12 IST)
ದುಬೈ: ಐಪಿಎಲ್ 13 ರಲ್ಲಿ ಕಳಪೆ ಬ್ಯಾಟಿಂಗ್ ಮುಂದುವರಿಸಿರುವ ಸಿಎಸ್ ಕೆ ನಾಯಕ ಧೋನಿ ಫಿಟ್ ಆಗಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.


ಧೋನಿ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಫಿಟ್ನೆಸ್ ಸುಧಾರಿಸಬೇಕು. ಐಪಿಎಲ್ ನಲ್ಲಿ  ಅವರ ಆಟ ನೋಡಿದರೆ ಅವರು ಸಂಪೂರ್ಣ ಫಿಟ್ ಆಗಿಲ್ಲವೆನಿಸುತ್ತದೆ. ನಾನು ಕ್ರಿಕೆಟ್ ನ್ನು ಬುದ್ಧಿವಂತಿಕೆ ಬಳಸಿ ಆಡುತ್ತಿದ್ದೆ, ಭಾವುಕನಾಗಿ ಅಲ್ಲ. ಹೀಗಿದ್ದರೆ ನಮಗೆ ವಯಸ್ಸು ಲೆಕ್ಕಕ್ಕೆ ಬರಲ್ಲ. ಧೋನಿಯೂ ಹಾಗೇ ಆಡಬೇಕಿದೆ. ಆಗ ವಯಸ್ಸನ್ನೂ ಮೀರಿ ಪ್ರದರ್ಶನ ನೀಡಬಹುದು ಎಂದು ಮಿಯಾಂದಾದ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ