ಐಪಿಎಲ್ 13: ಥ್ರಿಲ್ಲರ್ ಪಂಜಾಬ್ ಗೆ ಇಂದು ಟಾಪರ್ ಡೆಲ್ಲಿ ಎದುರಾಳಿ

ಮಂಗಳವಾರ, 20 ಅಕ್ಟೋಬರ್ 2020 (09:56 IST)
ದುಬೈ: ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್ ತಂಡವನ್ನು ಥ್ರಿಲ್ಲಿಂಗ್ ಪಂದ್ಯದಲ್ಲಿ ಸೋಲಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಮತ್ತೊಂದು ಪ್ರಬಲ ತಂಡ ಡೆಲ್ಲಿ ಕ್ಯಾಪಿಟಲ್ಸ್ ನ್ನು ಎದುರಿಸಲಿದೆ.


ಪಂಜಾಬ್ ನಿಧಾನವಾಗಿ ಗೆಲುವಿನ ಹಳಿಗೆ ಮರಳುತ್ತಿದ್ದು, ಅದೂ ಥ್ರಿಲ್ಲಿಂಗ್ ಜಯಗಳ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಿದೆ. ಬ್ಯಾಟಿಂಗ್ ನಲ್ಲಿ ಸ್ವತಃ ನಾಯಕ ಕೆಎಲ್ ರಾಹುಲ್ ಲೀಡಿಂಗ್ ಫ್ರಮ್ ದಿ ಫ್ರಂಟ್ ಎನ್ನುವಂತೆ ಮೆರೆಯುತ್ತಿರುವುದು ಇದಕ್ಕೆ ಕಾರಣ. ಇನ್ನು, ಡೆಲ್ಲಿ ಕೂಡಾ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ರಿಷಬ್ ಪಂತ್ ಇಲ್ಲದೇ ಹೋದರೂ, ಆರಂಭಿಕ ಶಿಖರ್ ಧವನ್, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಐಯರ್ ತಂಡಕ್ಕೆ ಉತ್ತಮ್ ರನ್ ಗಳಿಸಿಕೊಡುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಮತ್ತೊಂದು ರೋಚಕತೆ ನಿರೀಕ್ಷಿಸಬಹುದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ