ಅಕ್ರಮವಾಗಿ ದುಬಾರಿ ವಾಚು ಸಾಗಿಸಿ ಮುಂಬೈ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಕ್ರಿಕೆಟಿಗ ಕೃನಾಲ್ ಪಾಂಡ್ಯ

ಶುಕ್ರವಾರ, 13 ನವೆಂಬರ್ 2020 (10:44 IST)
ಮುಂಬೈ: ಐಪಿಎಲ್ ಮುಗಿಸಿ ಮುಂಬೈಗೆ ಬಂದಿಳಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅಕ್ರಮವಾಗಿ ವಾಚು ಸಾಗಿಸಿ ಮಾಡಿ ಸಿಕ್ಕಿಬಿದ್ದಿದ್ದಾರೆ.


ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯರನ್ನು ತಡೆಹಿಡಿದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃನಾಲ್ ಬಳಿ ನಾಲ್ಕು ದುಬಾರಿ ಬೆಲೆಯ ವಾಚುಗಳು ಅವರ ಬಳಿ ಪತ್ತೆಯಾಗಿದೆ. ಇವುಗಳ ಮೊತ್ತ ಸುಮಾರು 75 ಲಕ್ಷ ರೂ.ಗಳು ಎನ್ನಲಾಗಿದೆ. ಇದಕ್ಕೆ ಪಾಂಡ್ಯ ಸೂಕ್ತ ದಾಖಲೆ ನೀಡಿಲ್ಲ. ಈ ಪೈಕಿ ಎರಡು ಅವರ ವಾಚುಗಳಾಗಿದ್ದರೆ, ಇನ್ನುಳಿದ ಎರಡು ವಾಚುಗಳ ಅವರ ಸಹೋದರ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಸೇರಿದ್ದು ಎನ್ನಲಾಗಿದೆ. ವಿಚಾರಣೆ ನಡೆಸಿ ಸದ್ಯದಲ್ಲೇ ಕೃನಾಲ್ ರನ್ನು ಬಿಡುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ