ರೋಹಿತ್ ಶರ್ಮಾ ‘ಗಾಯದ’ ರಹಸ್ಯ ಕೊನೆಗೂ ಇಂದು ಬಯಲು

ಭಾನುವಾರ, 1 ನವೆಂಬರ್ 2020 (10:57 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಗಾಯದ ಕುರಿತಾಗಿ ಓಡಾಡುತ್ತಿರುವ ಹಲವು ಊಹಾಪೋಹಗಳಿಗೆ ಇಂದು ಸ್ಪಷ್ಟ ಉತ್ತರ ಸಿಗಲಿದೆ.


ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ನಾಯಕರಾಗಿರುವ ರೋಹಿತ್ ಗಾಯದ ಸಮಸ್ಯೆಯಿಂದಾಗಿ ಆಡುತ್ತಿಲ್ಲ. ಆಸ್ಟ್ರೇಲಿಯಾ ಸರಣಿಗೂ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ ಅವರಿಗೆ ಅಸಲಿಗೆ ಎಷ್ಟು ಗಂಭೀರ ಗಾಯವಾಗಿದೆ ಎಂಬುದೂ ಬಹಿರಂಗವಾಗಿಲ್ಲ. ಹೀಗಾಗಿ ಅವರ ಗಾಯದ ಬಗ್ಗೆ ಹಲವು ಊಹಾಪೋಹಗಳಿತ್ತು. ಇಂದು ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರಿಶೋಧನೆಗೊಳಪಡಿಸಲಿದ್ದು, ಅವರ ಗಾಯದ ಗಂಭೀರತೆ, ಆಸ್ಟ್ರೇಲಿಯಾ ಸರಣಿಗೆ ಅವರ ಲಭ್ಯತೆ ಕುರಿತು ಸ್ಪಷ್ಟ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ