ಐಪಿಎಲ್ ನಲ್ಲಿ ಮತ್ತೆ ಖಳನಾದ ಅಂಪಾಯರ್

ಬುಧವಾರ, 28 ಅಕ್ಟೋಬರ್ 2020 (11:36 IST)
ದುಬೈ: ಐಪಿಎಲ್ 13 ರಲ್ಲಿ ಮತ್ತೆ ಕಳಪೆ ಅಂಪಾಯರಿಂಗ್ ಸುದ್ದಿಯಾಗಿದೆ. ನಿನ್ನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಗೆ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಪ್ರಭಾವ ಬೀರಿದ್ದಕ್ಕೆ ಅಂಪಾಯರ್ ಅನಿಲ್ ಚೌಧರಿ ಟೀಕೆಗೆ ಗುರಿಯಾಗಿದ್ದಾರೆ.


ಡೆಲ್ಲಿ ಬ್ಯಾಟ್ಸ್ ಮನ್ ರವಿಚಂದ್ರನ್ ಅಶ್ವಿನ್ ವಿರುದ್ಧ ಎಲ್ ಬಿಡಬ್ಲ್ಯು ಮನವಿಯನ್ನು ಅಂಪಾಯರ್ ಪುರಸ್ಕರಿಸದಿದ್ದಾಗ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಡಿಆರ್ ಎಸ್ ಗೆ ಮನವಿ ಸಲ್ಲಿಸಲು ಹೊರಟಿದ್ದರು. ಆದರೆ ಈ ವೇಳೆ ಅಂಪಾಯರ್ ಅನಿಲ್ ಚೌಧರಿ ವಾರ್ನರ್ ಗೆ ಸಹಾಯ ಮಾಡಿದ್ದು, ಬಾಲ್ ಪ್ಯಾಡ್ ಗೆ ತಗುಲಿಲ್ಲ, ಬ್ಯಾಟ್ ಗೆ ತಗುಲಿದೆ ಎಂದು ಸ್ಪಷ್ಟನೆ ನೀಡಿ ಡಿಆರ್ ಎಸ್ ತೆಗೆದುಕೊಳ್ಳದಂತೆ ರಕ್ಷಿಸಿದ್ದರು. ಈ ರೀತಿ ಅಂಪಾಯರ್ ಗಳು ನಾಯಕನ ನಿರ್ಧಾರದ ಮೇಲೆ ಪ್ರಭಾವ ಬೀರುವಂತಿಲ್ಲ. ಆದರೆ ಅಂಪಾಯರ್ ಚೌಧರಿ ನಿಯಮಬಾಹಿರವಾಗಿ ಈ ರೀತಿ ಮಾಡಿದ್ದು ಟೀಕೆಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ