ಟಾಪ್ ಟೀಮ್ ಪಟ್ಟಿಯಿಂದ ಆರ್ ಸಿಬಿ ಹೆಸರು ಕೈ ಬಿಟ್ಟ ಯುವರಾಜ್ ಸಿಂಗ್: ಟ್ರೋಲ್ ಮಾಡಿದ ಚಾಹಲ್
ಸೋಮವಾರ, 19 ಅಕ್ಟೋಬರ್ 2020 (10:41 IST)
ದುಬೈ: ಐಪಿಎಲ್ 13 ರಲ್ಲಿ ಟಾಪ್ ತಂಡಗಳಾಗಿ ಫೈನಲ್ ಪ್ರವೇಶಿಸುವ ಸಾಧ್ಯತೆಯಿರುವ ತಂಡಗಳು ಯಾವುವು ಎಂದು ಪಟ್ಟಿ ಮಾಡುವಾಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಕೈ ಬಿಟ್ಟಿದ್ದಾರೆ. ಇದನ್ನು ಆರ್ ಸಿಬಿ ಬೌಲರ್ ಯಜುವೇಂದ್ರ ಚಾಹಲ್ ಟ್ರೋಲ್ ಮಾಡಿದ್ದಾರೆ.
ನಿನ್ನೆಯ ಥ್ರಿಲ್ಲಿಂಗ್ ಪಂದ್ಯ ನೋಡಿದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಜತೆಗೆ ಈ ಬಾರಿ ಐಪಿಎಲ್ ಫೈನಲ್ಸ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ನೋಡಬಹುದು ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಯುವಿ ಟ್ರೋಲ್ ಮಾಡಿರುವ ಆರ್ ಸಿಬಿ ಬೌಲರ್ ಯಜುವೇಂದ್ರ ಚಾಹಲ್, ‘ಭಯ್ಯಾ ನಾವು ಭಾರತಕ್ಕೆ ಬರಬೇಕೋ ಬೇಡವೋ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವಿ ಖಂಡಿತಾ, ಫೈನಲ್ ನೋಡಿಯೇ ಬನ್ನಿ ಎಂದಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಿರುವ ಚಾಹಲ್ ‘ಓಕೆ ಭಯ್ಯಾ 10 ನವಂಬರ್ ವರೆಗೆ ವಿಕೆಟ್ ಕೀಳುತ್ತಿರುತ್ತೇನೆ ಅಥವಾ ಸಿಕ್ಸರ್ ಚಚ್ಚಿಸಿಕೊಳ್ಳುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ.