ಅ.8ರಿಂದ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಾವಳಿ: ಮೋದಿ

ಸೋಮವಾರ, 25 ಮೇ 2009 (15:14 IST)
PTI
ಚಾಂಪಿಯನ್ಸ್ ಲೀಗ್ ಟ್ವೆಂಟಿ20ಯ ಉದ್ಘಾಟನಾ ಪಂದ್ಯಾವಳಿ ಭಾರತದಲ್ಲಿ ಅಕ್ಟೋಬರ್ ಎಂಟರಿಂದ 23ರವರೆಗೆ ನಡೆಯಲಿದೆ. ಈ ಲೀಗ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ.

ಭಾರತದಿಂದ ಮೂರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಂದ ತಲಾ ಎರಡು ಸ್ಥಳೀಯ ಚಾಂಪಿಯನ್ ತಂಡಗಳು ಹಾಗೂ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಗೂ ಶ್ರೀಲಂಕಾಗಳಿಂದ ಒಂದೊಂದು ತಂಡಗಳು ಭಾಗವಹಿಸಲಿವೆ. 12 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿನಿಂದಲೂ ಟಾಪ್ 2 ಗುಂಪುಗಳು ಎರಡನೇ ಸುತ್ತಿಗೆ ಆಯ್ಕೆಯಾಗಲಿವೆ. ಎರಡನೇ ಸುತ್ತಿನಿಂದ ಆಯ್ಕೆಯಾದ ನಾಲ್ಕು ತಂಡಗಳು ಸೆಮಿಫೈನಲ್ ತಲುಪಲಿವೆ.

ಕಳೆದ ವರ್ಷವೇ ಈ ಪಂದ್ಯಾವಳಿ ನಡೆಯಬೇಕಿದ್ದರೂ, ಮುಂಬೈ ಉಗ್ರರ ದಾಳಿಯಿಂದಾಗಿ ಪಂದ್ಯಾವಳಿ ಮುಂದೂಡಲಾಗಿತ್ತು.

ಭಾರತವನ್ನು ರಾಯಲ್ ಚಾಲೆಂಜರ್ಸ್, ಡೆಕ್ಕನ್ ಚಾರ್ಜರ್ಸ್, ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಪ್ರತಿನಿಧಿಸಲಿವೆ. ಆಸ್ಟ್ರೇಲಿಯಾದಿಂದ ವಿಕ್ಟೋರಿಯಾ ಹಾಗೂ ನ್ಯೂ ಸೌತ್ ವೇಲ್ಸ್ ತಂಡಗಳು, ದಕ್ಷಿಣ ಆಫ್ರಿಕಾದಿಂದ ಕೋಬ್ರಾಸ್ ಹಾಗೂ ಈಗಲ್ಸ್ ಎಂಬ ತಂಡಗಳು ಪ್ರತಿನಿಧಿಸಲಿವೆ. ಈ ಪಂದ್ಯಾವಳಿ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಕ್ರಿಕೆಟ್ ಸೌತ್ ಆಫ್ರಿಕಾ‌ಗಳ ಸಹಯೋಗದಲ್ಲಿ ನಡೆಯಲಿದೆ.

ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಾವಳಿ ಅಧ್ಯಕ್ಷ ಲಲಿತ್ ಮೋದಿ ಮಾತನಾಡಿ, ಭಾರತದ ಕ್ಲಬ್ ಕಾನ್ಸೆಪ್ಟ್ ಕ್ರಿಕೆಟ್ ಜಗತ್ತಿನಲ್ಲಿ ಭವಿಷ್ಯದ ದಿನಗಳಲ್ಲಿ ಜಗತ್ತಿನಾದ್ಯಂತ ಸ್ವೀಕರಿಸಲ್ಪಡುತ್ತದೆ. ದಕ್ಷಿಣ ಆಫ್ರಿಕಾ ಪ್ರವಾಸದಿಂದ ನಮ್ಮ ಈ ಕ್ಲಬ್ ಕಾನ್ಸೆಪ್ಟ್ ನಿಧಾನವಾಗಿಯಾದರೂ ಖಂಡಿತವಾಗಿಯೂ ಮುಂದೊಂದು ದಿನ ಗಟ್ಟಿಯಾಗಿ ಜಗತ್ತಿನಲ್ಲಿ ನಿಲ್ಲಬಲ್ಲುದು ಎಂದು ಭರವಸೆ ಹುಟ್ಟಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ