ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ಎಪ್ರೀಲ್ 16 ರಿಂದ ಪ್ರಾರಂಭವಾಗಲಿದೆ ಐಪಿಎಲ್

ಬುಧವಾರ, 12 ಮಾರ್ಚ್ 2014 (18:15 IST)
PTI
ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಹಂತದ ಕೆಲವು ಪಂದ್ಯಗಳು ಅರಬ್ ಸಂಯುಕ್ತ ಸಂಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿವೆ. ಪಂದ್ಯಾವಳಿ ಏಪ್ರಿಲ್ 16 ರಿಂದ ಪ್ರಾರಂಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ದಿನ ಭಾರತೀಯ ಕ್ರಿಕೆಟ್ ಮಂಡಳಿ ತೆಗೆದುಕೊಂಡ ಈ ನಿರ್ಧಾರ ಏಪ್ರಿಲ್ 16 ರಿಂದ ಜೂನ್ 1 ರವರೆಗೆ ನಡೆಯಲಿರುವ ಟಿ -20 ಪಂದ್ಯಾವಳಿ ಎಲ್ಲಿ ನಡೆಯಲಿದೆ ಎಂಬ ಕುತೂಹಲ ಮತ್ತು ಊಹಾಪೋಹಗಳಿಗೆ ತೆರೆ ಎಳೆದಿದೆ.

ಸಾರ್ವತ್ರಿಕ ಚುನಾವಣೆಯ ಕಾರಣಕ್ಕೆ ಈ ಪಂದ್ಯಾವಳಿಯ ಕೆಲವು ಪಂದ್ಯಗಳು ವಿದೇಶದಲ್ಲಿ ನಡೆಯಲಿದ್ದು , ಮೇ 13 ರ ನಂತರದ ಅಂತಿಮ ಸುತ್ತಿನ ಪಂದ್ಯಗಳು ಭಾರತದಲ್ಲಿ ನಡೆಯಲಿವೆ.

ಬಿಸಿಸಿಐ ಮೇ 1 ರ ನಂತರ ಭಾರತದಲ್ಲಿ ಪಂದ್ಯಗಳನ್ನು ನಡೆಸಲು ಸರ್ಕಾರದಿಂದ ಅನುಮತಿ ಕೇಳಿತ್ತು . ಆದರೆ ರಾಜ್ಯಗಳಲ್ಲಿ ಭದ್ರತೆ ಒದಗಿಸಲು ಸರ್ಕಾರ ಸಹಮತವನ್ನು ವ್ಯಕ್ತಪಡಿಸಿದರೆ ಮಾತ್ರ ಭಾರತದಲ್ಲಿ ಹೆಚ್ಚು ಪಂದ್ಯಾವಳಿಯನ್ನು ನಡೆಸಲು ಸಾಧ್ಯ.

ಬೋರ್ಡ್ ಕಾರ್ಯದರ್ಶಿ ಸಂಜಯ್ ಪಟೇಲ್," 2014ರ ಐಪಿಎಲ್ ಏಪ್ರಿಲ್ 16, 2014 ಬುಧವಾರದಿಂದ ಪ್ರಾರಂಭವಾಗಿ ಭಾನುವಾರ ಜೂನ್ 1, 2014 ರಂದು ಕೊನೆಗೊಳ್ಳುತ್ತದೆ ಎಂದು ಘೋಷಿಸಲು ಬಿಸಿಸಿಐಗೆ ಸಂತೋಷವಾಗುತ್ತಿದೆ" ಎಂದು ಹೇಳಿದ್ದಾರೆ.

"ಪಂದ್ಯಾವಳಿಯ ಆರಂಭಿಕ ಹಂತದ ಪಂದ್ಯಗಳನ್ನು ಯುಎಇ ಯ ಅಬುದಾಬಿ, ದುಬೈ ಮತ್ತು ಶಾರ್ಜಾಗಳಲ್ಲಿ 16 ಮತ್ತು 30 ಏಪ್ರಿಲ್ ನಡುವೆ ಆಡಲಾಗುತ್ತದೆ.

ಏಪ್ರಿಲ್ 16 ಬುಧವಾರದಿಂದ ಏಪ್ರಿಲ್ 30 ಬುಧವಾರದವರೆಗೆ ಕನಿಷ್ಠ 16 ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಡಲಾಗುವುದು" ಎಂದು ಬಿಸಿಸಿಐ ಹೇಳಿದೆ.

ಐಪಿಎಲ್ ಕೆಲವು ಪಂದ್ಯಗಳಲ್ಲಿ ಆತಿಥ್ಯ ನೀಡಿ ಸಂಪೂರ್ಣ ಬೆಂಬಲ ನೀಡುತ್ತಿರುವುದಕ್ಕೆ ಬಿಸಿಸಿಐ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಅದರ ಅಧ್ಯಕ್ಷ ಎಚ್ ಎಚ್ ಶೇಖ್ ನಹ್ಯಾನ್ ಮುಬಾರಕ್ ಅಲ್ ಮತ್ತು ಯುಎಇ ಸರ್ಕಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ