ಸ್ಪಾಟ್ ಫಿಕ್ಸಿಂಗ್ ತನಿಖೆಗೆ ಬಿಸಿಸಿಐ ಪ್ರಸ್ತಾವನೆ: ಸುಪ್ರೀಂಕೋರ್ಟ್ ವಿರೋಧ

ಮಂಗಳವಾರ, 22 ಏಪ್ರಿಲ್ 2014 (14:47 IST)
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ತನಿಖೆಗೆ ಬಿಸಿಸಿಐ ಮಂಡಿಸಿದ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.ಬಿಸಿಸಿಐ ಟೆಸ್ಟ್ ಮಾಜಿ ಆಟಗಾರ ರವಿಶಾಸ್ತ್ರಿ,  ಕೊಲ್ಕತ್ತಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಜೈ ನಾರಾಯಣ್ ಪಟೇಲ್ ಮತ್ತು ಮಾಜಿ ಸಿಬಿಐ ಬಾಸ್ ರಾಘವನ್ ಅವರನ್ನು ನೇಮಕ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ಗೆ  ಬಿಸಿಸಿಐ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಬಿಸಿಸಿಐ ನೇಮಿಸಿದ ಸಮಿತಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಎದುರಿಸುತ್ತಿದೆ. ರವಿ ಶಾಸ್ತ್ರಿ ಬಿಸಿಸಿಐ ವೇತನ ಪಡೆಯುವ ಹುದ್ದೆಯಲ್ಲಿದ್ದಾರೆ.  ಪಟೇಲ್ ಬಿಸಿಸಿಐ ಉಪಾಧ್ಯಕ್ಷ ಮತ್ತು ಹಾಲಿ ಮಧ್ಯಾಂತರ ಮುಖ್ಯಸ್ಥ ಶಿವಲಾಲ್ ಯಾದವ್ ಅವರ ಸಂಬಂಧಿಯಾಗಿದ್ದಾರೆ. ರಾಘವನ್ ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದ ಕ್ಲಬ್ ಕಾರ್ಯದರ್ಶಿಯಾಗಿದ್ದಾರೆ. ಸುಪ್ರೀಂಕೋರ್ಟ್ ಈಗ ನ್ಯಾಯಮೂರ್ತಿ ಮುಕುಲ್ ಮುದ್ಗುಲ್ ಅವರಿಗೆ ತನಿಖೆದಾರರ ನೆರವಿನೊಂದಿಗೆ ಹಗರಣದ ತನಿಖೆ ನಡೆಸುವುದಕ್ಕೆ ಸಾಧ್ಯವೇ ಎಂದು  ಪ್ರಶ್ನಿಸಿದೆ.
 
ಬಿಸಿಸಿಐ ನೇಮಕ ಮಾಡಿದ ಸಮಿತಿಯ ಪಟ್ಟಿಯನ್ನು ಬಿಸಿಸಿಐನ ಇಬ್ಬರು ಮಾಜಿ ಅಧ್ಯಕ್ಷರು ವಿರೋಧಿಸಿದ್ದರು. ಮಾಜಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಶಾಸ್ತ್ರಿ ಸೇರ್ಪಡೆಯನ್ನು ವಿರೋಧಿಸಿ ಅವರು ಮಂಡಳಿಯ ವೇತನ ಪಡೆಯುವ ಉದ್ಯೋಗಿ ಎಂದು ಹೇಳಿದರು.ಇದು ಹಿತಾಸಕ್ತಿ ಸಂಘರ್ಷದ ಸ್ಪಷ್ಟ ಪ್ರಕರಣ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ