ಒಂದು ಕಡೆ ಬಿಸಿಸಿಐ ಪದಾಧಿಕಾರಿಗಳು ಅನವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುತ್ತಿರುವ ನಡುವೆ, ಇನ್ನೊಂದು ಕಡೆ ತನ್ನ ಅಂಪೈರ್ಗಳಿಗೆ ತರಬೇತಿ ನೀಡಲು ಮಂಡಳಿ ಭಾರೀ ವೆಚ್ಚ ಮಾಡುತ್ತಿದೆ. ಯಾವುದೇ ಭಾರತೀಯರು ಅಂಪೈರ್ಗಳು ಮುಟ್ಟಬಹುದಾದ ಅತ್ಯಧಿಕ ಮಟ್ಟವಾದ ಐಸಿಸಿ ಎಲೈಟ್ ಪ್ಯಾನೆಲ್ಗೆ 11 ವರ್ಷಕ್ಕಿಂತ ಹೆಚ್ಚು ಕಾಲ ಮುಟ್ಟಿಲ್ಲ ಎನ್ನುವುದು ಸುಳ್ಳಲ್ಲ. 2004ರ ಜನವರಿಯಲ್ಲಿ ಎಸ್. ವೆಂಕಟರಾಘವನ್ ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ್ದರು.
ಇಂತಹ ತಪ್ಪುಗಳನ್ನು ಸರಿಪಡಿಸಲು 2013ರಲ್ಲಿ ಬಿಸಿಸಿಐ ಭಾರತೀಯ ಅಂಪೈರ್ಗಳಿಗೆ ಶಿಕ್ಷಣ ನೀಡುವುದಕ್ಕಾಗಿ ತಜ್ಞರನ್ನು ನೇಮಿಸಿಕೊಳ್ಳಲು ನಿರ್ಧರಿಸಿತು. ಪ್ರಸಕ್ತ ಐಸಿಸಿ ಅಂಪೈರ್ ಪರ್ಫಾರ್ಮೆನ್ಸ್ ಮತ್ತು ಟ್ರೇನಿಂಗ್ ಮ್ಯಾನೇಜರ್ ಆಗಿರುವ ಆಸ್ಟ್ರೇಲಿಯಾದ ನಿವೃತ್ತ ಸೈಮನ್ ಟೌಫೆಲ್ ಅವರನ್ನು 2013-14ರ ಆವೃತ್ತಿಯೊಳಗೆ 100 ಭಾರತೀಯ ಅಂಪೈರ್ಗಳಿಗೆ ತರಬೇತು ನೀಡಲು ಆಯ್ಕೆ ಮಾಡಲಾಯಿತು.
ಟೌಫಲ್ ಸೇವೆಗೆ ಬಿಸಿಸಿಐ ಈಗ ಭಾರೀ ಬೆಲೆ ತೆತ್ತಿದ್ದು, ಒಟ್ಟು 2014 ಮತ್ತು 2015ರ ಅವಧಿಗೆ 1,10,000 ಡಾಲರ್ ಶುಲ್ಕವನ್ನು ಪಾವತಿ ಮಾಡಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಪ್ರಸ್ತುತ ವಿನಿಮಯ ದರವಾದ ಪ್ರತಿ ಡಾಲರ್ಗೆ 63.81ರೂ. ದರದಲ್ಲಿ ಇದು 70 ಲಕ್ಷ ರೂ.ಗಳಾಗುತ್ತದೆ.