ಕೊರೋನಾ ಟೆಸ್ಟ್ ಗೆ 10 ಕೋಟಿ ರೂ. ವ್ಯಯಿಸಲಿರುವ ಬಿಸಿಸಿಐ

ಗುರುವಾರ, 3 ಸೆಪ್ಟಂಬರ್ 2020 (10:48 IST)
ದುಬೈ: ಐಪಿಎಲ್ 13 ಕೂಟಕ್ಕೆ ಮುನ್ನ ಬಿಸಿಸಿಐ ಎಲ್ಲಾ ಆಟಗಾರರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸುತ್ತಿದ್ದು, ಈ ಪರೀಕ್ಷೆಗಾಗಿಯೇ ಸುಮಾರು 10 ಕೋಟಿ ರೂ. ವ್ಯಯಿಸಲಿದೆ ಎಂದು ತಿಳಿದುಬಂದಿದೆ.

 

ಕೂಟದ ನಡುವೆಯೂ ಅಂದರೆ ಪ್ರತೀ ವಾರವೂ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ನಡೆಯಲಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಿದೆ. ದುಬೈನಲ್ಲಿರುವ ಆಟಗಾರರಿಗೆ ಯುಎಇ ಮೂಲದ ಅಧಿಕಾರಿಗಳೇ ಪರೀಕ್ಷೆ ನಡೆಸಲಿದ್ದಾರೆ. ತೆರಿಗೆ ಇತ್ಯಾದಿ ಸೇರಿ ಪ್ರತೀ ಆಟಗಾರನಿಗೆ ಸುಮಾರು 200 ದಿನಾರ್ ವೆಚ್ಚವಾಗಲಿದೆ. ದುಬಾರಿಯಾದರೂ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಬಿಸಿಸಿಐ ಈ ಕ್ರಮಕೈಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ