ಐಪಿಎಲ್ ಪ್ರಾಯೋಜಕ ಡ್ರೀಮ್ 11 ಬಗ್ಗೆ ಬಿಸಿಸಿಐನಲ್ಲೇ ಅಸಮಾಧಾನ

ಗುರುವಾರ, 20 ಆಗಸ್ಟ್ 2020 (12:04 IST)
ಮುಂಬೈ: ಡ್ರೀಮ್ 11 ಐಪಿಎಲ್ 13 ನೇ ಆವೃತ್ತಿಯ ಟೈಟಲ್ ಪ್ರಾಯೋಜಕತ್ವ ಗಳಿಸಿಕೊಂಡಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಣೆಯನ್ನೇನೋ ಮಾಡಿದ್ದಾರೆ. ಆದರೆ ಡ್ರೀಮ್ 11 ಮುಂದಿನ ಎರಡು ವರ್ಷಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಸಲ್ಲಿಸಿರುವ ಬಿಡ್ ಮೊತ್ತದ ಬಗ್ಗೆ ಈಗ ಬಿಸಿಸಿಐನಲ್ಲೇ ಅಸಮಾಧಾನವಿದೆ ಎನ್ನಲಾಗಿದೆ.


2021 ಮತ್ತು 2022 ರ ಐಪಿಎಲ್ ಗೂ ಡ್ರೀಮ್ 11 ತಲಾ 240 ಕೋಟಿ ರೂ.ಗಳ ಬಿಡ್ ಸಲ್ಲಿಸಿತ್ತು. ಆದರೆ ಈ ಮೊತ್ತ ಬಿಸಿಸಿಐಗೆ ಸಮಾಧಾನವಾಗಿಲ್ಲವೆನ್ನಲಾಗಿದೆ. ಹೀಗಾಗಿ ಈಗ ಡ್ರೀಮ್ 11 ಪ್ರಾಯೋಜಕತ್ವದ ಬಗ್ಗೆ ಮತ್ತಷ್ಟು ಚರ್ಚಿಸಿ ನಿರ್ಧಾರಕ್ಕೆ ಬರಲು ಬಿಸಿಸಿಐ ತೀರ್ಮಾನಿಸಿದೆ.

ಈ ಮೊದಲು ವಿವೋ ಸಂಸ್ಥೆ 440 ಕೋಟಿ ರೂ.ಗಳ ಪ್ರತೀ ವರ್ಷದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಗಳಿಸಿಕೊಂಡಿತ್ತು. ಆ ದೃಷ್ಟಿಯಲ್ಲಿ ನೋಡುವುದಾದರೆ ಡ್ರೀಮ್ 11 ತೀರಾ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದೆ. ಹೀಗಾಗಿ ಈ ಬಿಡ್ ಕುರಿತಂತೆ ಬಿಸಿಸಿಐ ಮರುಪರಿಶೀಲನೆ ನಡೆಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ