ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡ ಡ್ರೀಮ್ 11

ಮಂಗಳವಾರ, 18 ಆಗಸ್ಟ್ 2020 (16:55 IST)
ಮುಂಬೈ: ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೋ ಕಂಪನಿ ಹಿಂದೆ ಸರಿಯುತ್ತಿದ್ದಂತೇ ಬಿಸಿಸಿಐ ಹೊಸ ಪ್ರಾಯೋಜಕರಿಗಾಗಿ ಬಿಡ್ ಆಹ್ವಾನಿಸಿತ್ತು. ಈ ಟೈಟಲ್ ಪ್ರಾಯೋಜಕತ್ವದ ಪೈಪೋಟಿಯಲ್ಲಿ ಈಗ ಡ್ರೀಮ್ 11 ಗೆಲುವು ಕಂಡಿದೆ.


ಡ್ರೀಮ್ 11 ಅಲ್ಲದೇ ಭಾರತೀಯ ಮೂಲದ ಟಾಟಾ ಸಂಸ್ಥೆ, ಅನ್ ಎಕಾಡೆಮಿ ಸೇರಿದಂತೆ ಹಲವು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಡ್ರೀಮ್ 11 222 ಕೋಟಿ ರೂ.ಗೆ ಪ್ರಾಯೋಜಕತ್ವ ಪಡೆದುಕೊಂಡಿದೆ.

ಈ ಬಾರಿಯ ಐಪಿಎಲ್ ಆವೃತ್ತಿಗೆ ಮಾತ್ರ ಡ್ರೀಮ್ 11 ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡಿರುವುದು. ಮುಂದಿನ ಐಪಿಎಲ್ ಗೆ ಮತ್ತೆ ವಿವೋ ಅಥವಾ ಬೇರೆ ಕಂಪನಿ ಟೈಟಲ್ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ