ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಿಂಚಬೇಕು: ಸ್ಟೀಫನ್ ಫ್ಲೆಮಿಂಗ್

ಶುಕ್ರವಾರ, 22 ಮೇ 2015 (10:17 IST)
ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪ್ರವೇಶ ಮಾಡುವುದಕ್ಕೆ ನಮ್ಮ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಮೂಹಿಕವಾಗಿ ಮಿಂಚಬೇಕಾದ ಅಗತ್ಯವಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್  ಫ್ಲೆಮಿಂಗ್ ಹೇಳಿದ್ದಾರೆ.

 ರಾಯಲ್ ಚಾಲೆಂಜರ್ಸ್ ವಿರುದ್ಧ ಇಂದು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಮುಂಚಿತವಾಗಿ ಮಾತನಾಡಿದ ಫ್ಲೆಮಿಂಗ್, ನಮ್ಮ ಬ್ಯಾಟ್ಸ್‌ಮನ್‌ಗಳು ತಪ್ಪು ಹೊಡೆತಗಳಿಂದ ಔಟಾಗುತ್ತಿದ್ದಾರೆ.   ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಕಳೆದುಕೊಂಡ ವಿಕೆಟ್‌ಗಳಿಗಿಂತ ಹೆಚ್ಚು ವಿಕೆಟ್ ಕಳೆದುಕೊಂಡಿದ್ದೇವೆ. ಆದ್ದರಿಂದ ಹೆಚ್ಚು ಆಟಗಾರರು ಸತ್ವಭರಿತ ಇನ್ನಿಂಗ್ಸ್ ಆಡಬೇಕು. ಮೇಲಿನ ಕ್ರಮಾಂಕದ ನಾಲ್ಕು ಅಥವಾ ಐದು ಬ್ಯಾಟ್ಸ್‌ಮನ್‌ಗಳು ಬಹುಮಟ್ಟಿನ ರನ್‌ಗಳನ್ನು ಗಳಿಸಬೇಕು ಎಂದು ಫ್ಲೆಮಿಂಗ್ ಹೇಳಿದ್ದಾರೆ.
 
ಬೇರೆ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ವ್ಯತ್ಯಾಸ ಬಹುಶಃ ಅದೇ ಆಗಿದೆ. ನಾವು ಮೇಲಿನ ಕ್ರಮಾಂಕದ ರನ್‌ಗಳಲ್ಲಿ ಕೊರತೆ ಅನುಭವಿಸಿದ್ದೇವೆ. ಅದನ್ನು ಸರಿಪಡಿಸುವ ಅವಕಾಶ ನಮಗಿದ್ದು, ಅದನ್ನು ನೆರವೇರಿಸಲು ಉತ್ತಮ ಮೇಲಿನ ಕ್ರಮಾಂಕದ ಆಟಗಾರು ನಮ್ಮಲ್ಲಿದ್ದಾರೆ ಎಂದು ಅವರು ಹೇಳಿದರು.
 
ಬ್ರೆಂಡನ್ ಮೆಕಲಮ್ ಅವರನ್ನು ಬಿಟ್ಟು ಇತರ ಮೇಲಿನ ಕ್ರಮಾಂಕದ ಆಟಗಾರರು ಈ ಆವೃತ್ತಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಡವಾಡಿಲ್ಲವಾದ್ದರಿಂದ ಅವರು ಎಸ್‌ಸಿಎ ಕ್ರೀಡಾಂಗಣದಲ್ಲಿ ಮಿಂಚಬೇಕಾಗಿದೆ ಎಂದು ಫ್ಲೆಮಿಂಗ್ ಅಭಿಪ್ರಾಯಪಟ್ಟರು. 
 

ವೆಬ್ದುನಿಯಾವನ್ನು ಓದಿ