ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಯ

ಮಂಗಳವಾರ, 22 ಏಪ್ರಿಲ್ 2014 (17:42 IST)
ಬುದಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ  ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು  ಪೆಪ್ಸಿ ಐಪಿಎಲ್ 7ನೇ ಋತುವಿನ 8ನೇ ಪಂದ್ಯದಲ್ಲಿ 93 ರನ್‌ಗಳಿಂದ ಸೋಲಿಸಿದೆ.  178 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ ನಿಯಮಿತ ಅಂತರಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು 15.3 ಓವರುಗಳಲ್ಲಿ 84ಕ್ಕೆ 9 ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿತು. ಕೊನೆಯ ಆಟಗಾರ ನಾಥನ್ ಕೌಲ್ಟರ್ ನೈಲ್ ಗಾಯಗೊಂಡಿದ್ದರಿಂದ ಆಡಲಾಗಲಿಲ್ಲ. ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 205 ರನ್ ಗಳಿಸಿದ್ದರೂ ಸಿಎಸ್‌ಕೆ ಬೌಲರುಗಳು ವಿಫಲರಾದ್ದರಿಂದ  ಸೋಲನ್ನಪ್ಪಿತ್ತು. 

ಈ ತಪ್ಪಿನಿಂದ ಪಾಠ ಕಲಿತ ಸಿಎಸ್‌ಕೆ ನಾಯಕ ಧೋನಿ ಮೂರು ಬದಲಾವಣೆಗಳನ್ನು ಮಾಡಿದ್ದರಿಂದ ಉತ್ತಮ ಫಲಿತಾಂಶ ನೀಡಿದೆ.ಆಶಿಶ್ ನೆಹ್ರಾ ಬದಲಿಗೆ ತಂಡಕ್ಕೆ ಹಿಂತಿರುಗಿದ ಈಶ್ವರ್ ಪಾಂಡೆ 23 ರನ್ ನೀಡಿ 2 ವಿಕೆಟ್ ಪಡೆದರು. ಸುರೇಶ್ ರೈನಾ ಮತ್ತು ಪ್ಲೆಸಿಸ್ ಮೈದಾನದಲ್ಲಿ ಮಿಂಚಿನಂತೆ ಕಾರ್ಯನಿರ್ವಹಿಸಿ ಐದು ಉತ್ತಮ ಕ್ಯಾಚುಗಳನ್ನು ಹಿಡಿದರು.ಇದಕ್ಕೆ ಮುಂಚೆ ಬ್ಯಾಟಿಂಗ್‌ಗೆ ಇಳಿದಿದ್ದ ಚೆನ್ನೈ ಪರ ಸ್ಮಿತ್ 29 ಮತ್ತು ರೈನಾ ಎರಡನೇ ವಿಕೆಟ್‌ಗೆ 54 ರನ್ ಕಲೆಹಾಕಿದರು. ಸ್ಮಿತ್ ಔಟಾದ ನಂತರ ಪ್ಲೆಸಿಸ್ ಆಡಲಿಳಿದರು. ಈ ಹಂತದಲ್ಲಿ ಮುರಳಿ ವಿಜಯ್ ಅವರನ್ನು ಬೌಲಿಂಗ್‌ಗೆ ಇಳಿಸಿದ್ದು ವರದಾನವಾಗಿ ಪರಿಣಮಿಸಿತು.

ರೈನಾ ವಿಜಯ್ ಬೌಲಿಂಗ್‌ನಲ್ಲಿ 3 ಬೌಂಡರಿಗಳನ್ನು ಹೊಡೆದದ್ದರಿಂದ ಸಿಎಸ್‌ಕೆ ಸರಾಗವಾಗಿ ಮುನ್ನಡೆಯಿತು. ನಂತರ ಡೆಲ್ಲಿ ಬೌಲರುಗಳು ಸಿಎಸ್‌ಕೆ ರನ್ ರೇಟ್‌ ನಿಯಂತ್ರಿಸಿದರು. ನೀಶಮ್ ಅಪಾಯಕಾರಿಯಾಗಿ ಕಂಡುಬಂದ ರೈನಾ ಅವರನ್ನು ಔಟ್ ಮಾಡಿದರು. ರೈನಾ 56 ಎಸೆತಗಳ ನೆರವಿನಿಂದ 41 ರನ್ ಬಾರಿಸಿದ್ದರು.ನಂತರ ಆಡಲಿಳಿದ ಧೋನಿ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡದೇ 15 ಎಸೆತಗಳಲ್ಲಿ 32 ರನ್ ಬಾರಿಸಿ ತಮ್ಮ ತಂಡ 7 ವಿಕೆಟ್ ನಷ್ಟಕ್ಕೆ 177 ಸವಾಲಿನ ಮೊತ್ತ ಹೊಡೆಯಲು ನೆರವಾದರು. 

ವೆಬ್ದುನಿಯಾವನ್ನು ಓದಿ