ಮುಂಬೈ ಇಂಡಿಯನ್ಸ್ ತಂಡದಲ್ಲಿ ಆರಾನ್ ಫಿಂಚ್ ಬದಲಿಗೆ ಕಾಲಿನ್ ಮನ್ರೋ

ಶುಕ್ರವಾರ, 24 ಏಪ್ರಿಲ್ 2015 (16:32 IST)
2015ನೇ ಐಪಿಎಲ್ ಆವೃತ್ತಿಗೆ ಮುಂಬೈ ಇಂಡಿಯನ್ಸ್ ಆರಾನ್ ಫಿಂಚ್ ಬದಲಿಗೆ ನ್ಯೂಜಿಲೆಂಡ್ ಆಲ್‌ರೌಂಡರ್ ಕಾಲಿನ್ ಮೊನ್ರೊ ಅವರನ್ನು  ಆಡಿಸಲಿದೆ. ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಅಲ್ಲದೇ ಮುಂಬೈ ಕೋರಿ ಆಂಡರ್‌ಸನ್ ಅವರನ್ನು ಗಾಯದ ಹಿನ್ನೆಲೆಯಲ್ಲಿ ಕಳೆದುಕೊಂಡಿದೆ. 
 
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೋಚ್ ಆಗಿರುವ ಮುಂಬೈ ಇಂಡಿಯನ್ಸ್ ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿದ್ದು, ಇಬ್ಬರು ದೊಡ್ಡ ಆಟಗಾರರ ಗೈರಿನಿಂದಾಗಿ ಮುಂಬೈ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.
 
28 ವರ್ಷದ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಮೋನ್ರೊ ಆಕ್ಲೆಂಡ್ ಪರ ಪ್ಲಂಕೆಟ್ ಶೀಲ್ಡ್‌ನಲ್ಲಿ ಭಾರೀ ಸ್ಕೋರ್ ದಾಖಲಿಸಿದ್ದರು. ದೇಶೀಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಅವರನ್ನು ಬ್ಲಾಕ್ ಕ್ಯಾಪ್ಸ್ ಏಕದಿನ ಅಥವಾ ಟೆಸ್ಟ್ ತಂಡದಲ್ಲಿ ಅವರನ್ನು ಹೆಸರಿಸಿರಲಿಲ್ಲ. 
 
ಇದಕ್ಕೆ ಮುಂಚೆ ಆಂಡರ್‌ಸನ್ ಕೂಡ ಗಾಯಾಳುಗಳ ಪಟ್ಟಿಯಲ್ಲಿ ಫಿಂಚ್ ಜೊತೆಗೂಡಿದ್ದಾರೆ.  ಕಿವಿ ಆಲ್‌ರೌಂಡರ್‌  ಗಾಯದಿಂದಾಗಿ ರಾಯಲ್ ಚಾಲೆಂಜರ್ಸ್  ವಿರುದ್ಧ ಪಂದ್ಯ ಮಿಸ್ ಮಾಡಿಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ