ಐಪಿಎಲ್ ಗೂ ತಟ್ಟಲಿದೆಯಾ ಕೊರೊನಾವೈರಸ್ ಭೀತಿ? ಗಂಗೂಲಿ ಹೇಳಿದ್ದೇನು?

ಬುಧವಾರ, 4 ಮಾರ್ಚ್ 2020 (10:05 IST)
ಮುಂಬೈ: ಇನ್ನೇನು ಐಪಿಎಲ್ ಆರಂಭವಾಗಲಿದೆ. ಅದಕ್ಕಾಗಿ ದೇಶ ವಿದೇಶದ ತಾರಾ ಆಟಗಾರರು ಭಾರತದಲ್ಲಿ ಬೀಡುಬಿಡಲಿದ್ದಾರೆ. ಆದರೆ ಅದರ ಜತೆಗೇ ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆಟಗಾರರಲ್ಲಿ ಭೀತಿ ಸೃಷ್ಟಿಸಿದೆ.


ಹೀಗಾಗಿ ಐಪಿಎಲ್ ಕೂಟದ ಮೇಲೂ ಕೊರೊನಾ ಭೀತಿ ಆವರಿಸಲಿದೆಯೇ? ಇದರಿಂದಾಗಿ ಪಂದ್ಯಗಳು ರದ್ದಾಗಬಹುದೇ ಎಂಬಿತ್ಯಾದಿ ಆತಂಕಗಳು ಮನೆ ಮಾಡಿವೆ. ಇದಕ್ಕೆಲ್ಲಾ ಬಿಸಿಸಿಐ ಅಧ್ಯಕ್ಷ ಗಂಗೂಲಿ ಉತ್ತರ ನೀಡಿದ್ದಾರೆ.

‘ಸದ್ಯದ ಬೆಳವಣಿಗೆಗಳ ಪ್ರಕಾರ ಐಪಿಎಲ್ ಗೆ ಕೊರೊನಾ ಭೀತಿ ಇಲ್ಲ. ನಮ್ಮ ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ನಡೆದಿಲ್ಲ. ನಾವು ಸದ್ಯದ ಬೆಳವಣಿಗೆಗಳ ಬಗ್ಗೆ ನಿಗಾ ಇಟ್ಟಿದ್ದೇವೆ’ ಎಂದು ಗಂಗೂಲಿ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅಭಯ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ