ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ನಡುವೆ ಇಂದಿನ ಪಂದ್ಯ

ಬುಧವಾರ, 20 ಏಪ್ರಿಲ್ 2022 (09:30 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ.

ರಿಷಬ್ ಪಂತ್ ಪಡೆ ಉತ್ತಮ ಪ್ರದರ್ಶನದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸಿತ್ತು. ಕೇವಲ 2 ಗೆಲುವು ಪಡೆದಿರುವ ರಿಷಬ್ ಪಡೆ ಸದ್ಯಕ್ಕೆ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆಯಷ್ಟೇ.

ಆದರೆ ಕಿಂಗ್ಸ್ ಪಂಜಾಬ್ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಎಲ್ಲಾ ಇದ್ದೂ ಗೆಲುವು ಮಾತ್ರ ಕೈಗೆಟುಕುತ್ತಿಲ್ಲ. ಒಟ್ಟಾರೆ ಆರು ಪಂದ್ಯಗಳಿಂದ ಸಿಕ್ಕಿದ್ದು ಮೂರೇ ಗೆಲುವು. ಕಳೆದ ಪಂದ್ಯದಲ್ಲಿ ಸೋತಿರುವ ಪಂಜಾಬ್ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ