ಐಪಿಎಲ್`ನಲ್ಲೂ ನಾಯಕತ್ವ ಕಳೆದುಕೊಂಡ ಧೋನಿ

ಭಾನುವಾರ, 19 ಫೆಬ್ರವರಿ 2017 (15:01 IST)
ಎಲ್ಲ ಮಾದರಿಯ ಕ್ರಿಕೆಟ್ ನಾಯಕತ್ವವನ್ನೂ ತೊರೆದಿರುವ ಧೋನಿ ಇದೀಗ ಐಪಿಎಲ್ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ.  ಐಪಿಎಲ್`ನ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ತಂಡದ ನಾಯಕತ್ವ ಸ್ಥಾನದಿಂದ ಧೋನಿಯನ್ನ ಇಳಿಸಲಾಗಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನ ನೂತನ ನಾಯಕನಾಗಿ ಆಯ್ಕೆ ಮಾಡಲಾಗಿದೆ.
























ಸ್ಟೀವ್ ಸ್ಮಿತ್ ಅವರನ್ನ ನೂತನ ನಾಯಕನಾಗಿ ಆಯ್ಕೆ ಮಾಡಿರುವುದಾಗಿ ಪುಣೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ತಂಡ ಒಳ್ಳೆಯ ಆಟಗಾರರಿಂದ ಕೂಡಿದ್ದರೂ ಕಳೆದ ಸೀಸನ್ನಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸೋತಿದ್ದರಿಂದ  ಬಾರಿ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾಯಕತ್ವ ಕಳೆದುಕೊಂಡರೂ ಧೋನಿ, ಸ್ಮಿತ್`ಗೆ ಸಂಪೂರ್ಣ ಬೆಂಬಲ ನಿಡಲಿದ್ದಾರೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್`ಮನ್ ಆಗಿ ಧೋನಿ ಮುಂದುವರೆಯಲಿದ್ದಾರೆ ಎಂದು ಗೋಯೆಂಕಾ ತಿಳಿಸಿದ್ಧಾರೆ.
.

ವೆಬ್ದುನಿಯಾವನ್ನು ಓದಿ