ಆರ್‌ಸಿಬಿ ವಿರುದ್ಧ ಗೆಲುವು: ಸಿಎಸ್‌ಕೆ ಬೌಲರುಗಳಿಗೆ ಧೋನಿ ಶ್ಲಾಘನೆ

ಶನಿವಾರ, 23 ಮೇ 2015 (16:45 IST)
ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಮೈಕೇಲ್ ಹಸ್ಸಿಯ ಅರ್ಧಶತಕವನ್ನು ಶ್ಲಾಘಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಾಧಾರಣ ಮೊತ್ತಕ್ಕೆ ಔಟ್ ಮಾಡಿದ ಬೌಲರುಗಳಿಗೆ ಶಹಭಾಷ್ ಗಿರಿ ನೀಡಿದರು. ಆಶಿಶ್ ನೆರ್ಹಾ ಮೂರು ವಿಕೆಟ್ ಕಬಳಿಸಿ ಆರ್‌ಸಿಬಿಯನ್ನು 139ಕ್ಕೆ ನಿರ್ಬಂಧಿಸಿದ್ದರು.  ಅಶ್ವಿನ್ ಗೇಲ್ ವಿರುದ್ಧ ನಿಜವಾಗಲೂ ಚೆನ್ನಾಗಿ ಬೌಲ್ ಮಾಡಿದರು. ವೇಗಿಗಳು ಅವರಿಗೆ ಬೆಂಬಲವಾಗಿ ನಿಂತರು. ಗೇಲ್ ಅಲ್ಲಿರುವ ತನಕ ನಾವು ಎಡಗೈ ಸ್ಪಿನ್ನರುಗಳನ್ನು ಬೌಲಿಂಗ್‌ ಇಳಿಸಿರಲಿಲ್ಲ ಎಂದು ಧೋನಿ ಹೇಳಿದರು. 
 
ಈ ವಿಕೆಟ್‌ಗೆ ಅಗತ್ಯವಿದ್ದ ಸ್ಕೋರ್ ಎಷ್ಟೆಂದು ಹೇಳುವುದು ಕಷ್ಟ. ಆರ್‌ಸಿಬಿ 10-12ರನ್ ಕೊರತೆ ಎದುರಿಸಿತೆಂದು  ನಾನು ಭಾವಿಸಿದ್ದೇನೆ. ನಾವು ಪ್ರತಿಯೊಂದು ಆಟದೊಂದಿಗೂ ಸುಧಾರಿಸಿದ್ದೇವೆ ಎಂದು ಧೋನಿ ಹೇಳಿದ್ದಾರೆ. 
 
ನಿಧಾನ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ತಿಣುಕಾಡಿದರು ಮತ್ತು ನಾವು 15-20 ರನ್ ಕೊರತೆ ಎದುರಿಸಿದ್ದಾಗಿ ಕೊಹ್ಲಿ ಹೇಳಿದ್ದಾರೆ. ನಮಗೆ ಬೇಕಾಗಿದ್ದ ಆರಂಭ ಸಿಗಲಿಲ್ಲ. ಸಿಎಸ್‌ಕೆ ಒಳ್ಳೆಯ ಬೌಲಿಂಗ್ ಮಾಡಿದ್ದಾರೆ. ಕಡಿಮೆ ಮೊತ್ತಗಳು ಸದಾ ಕ್ಲಿಷ್ಟವಾಗಿರುತ್ತದೆಂದು ನಾನು ಸದಾ ಯೋಚಿಸುತ್ತೇನೆ. ವಿಶೇಷವಾಗಿ ಇಂತಹ ವಿಕೆಟ್‌ಗಳಲ್ಲಿ ಕ್ಲಿಷ್ಟವಾಗಿರುತ್ತದೆ ಎಂದು ನುಡಿದರು. 
 
ಆರ್‌ಸಿಬಿ ಕೂಡ ಕಳಪೆ ಫೀಲ್ಡಿಂಗ್ ಮಾಡಿದ್ದು, ಕೆಲವು ಅವಕಾಶಗಳನ್ನು ಬಿಟ್ಟಿದ್ದರಿಂದ ಬೆಲೆ ತೆರಬೇಕಾಯಿತು. ದುರದೃಷ್ಟವಶಾತ್ ನಾವು 3-4 ಅವಕಾಶ ತಪ್ಪಿಸಿಕೊಂಡೆವು. ನಾವು ಅವಕಾಶಗಳನ್ನು ಬಳಸಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತೆಂದು ಅವರು ಪ್ರತಿಕ್ರಿಯಿಸಿದರು. 

ವೆಬ್ದುನಿಯಾವನ್ನು ಓದಿ