ಸಿಕ್ಸರ್ ವಿಚಾರಕ್ಕೆ ಧೋನಿ, ರೋಹಿತ್, ಸುರೇಶ್ ರೈನಾ ನಡುವೆ ರೇಸ್
ಇದೀಗ ಮೂವರೂ 200 ಸಿಕ್ಸರ್ ಗಳ ದಾಖಲೆ ಮಾಡಲು ರೇಸ್ ನಲ್ಲಿದ್ದಾರೆ. ಮೂವರ ಪೈಕಿ ಧೋನಿ 186 ಸಿಕ್ಸರ್ ಗಳೊಂದಿಗೆ ಮುಂದಿದ್ದಾರೆ. ನಂತರ ಸುರೇಶ್ ರೈನಾ 185 ಸಿಡಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಖಾತೆಯಲ್ಲಿ 184 ಸಿಕ್ಸರ್ ಗಳಿವೆ. ಈ ಮೂವರೂ ಆಟಗಾರರ ಪೈಕಿ ಯಾರು ಮೊದಲು 200 ಸಿಕ್ಸರ್ ಗಳ ಗುರಿ ತಲುಪುತ್ತಾರೆ ಕಾದು ನೋಡಬೇಕಿದೆ.