ಮಾರ್ಚ್ 11 ರಿಂದ ಚೆನ್ನೈನಲ್ಲಿ ಧೋನಿ ಹವಾ
ಧೋನಿ ಇದೀಗ ಐಪಿಎಲ್ ಹೊರತಾಗಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನಾಡುತ್ತಿಲ್ಲ. ಹೀಗಾಗಿ ಅವರು ಐಪಿಎಲ್ ಗೆ ಮೊದಲೇ ತಯಾರಿ ಆರಂಭಿಸುತ್ತಾರೆ. ಕಳೆದ ವರ್ಷವೂ ಒಂದು ತಿಂಗಳ ಮೊದಲೇ ತರಬೇತಿ ಆರಂಭಿಸಿದ್ದರು. ಆದರೆ ಕೊರೋನಾದಿಂದಾಗಿ ನಿಗದಿತ ಸಮಯಕ್ಕೆ ಐಪಿಎಲ್ ನಡೆದಿರಲಿಲ್ಲ.
ಕಳೆದ ಆವೃತ್ತಿಯಲ್ಲಿ ಸುರೇಶ್ ರೈನಾ ಆಡಿರಲಿಲ್ಲ. ಹಾಗಿದ್ದರೂ ರೈನಾರನ್ನು ಈ ವರ್ಷವೂ ಚೆನ್ನೈ ತಂಡ ಉಳಿಸಿಕೊಂಡಿದೆ. ಹೀಗಾಗಿ ಅವರೂ ಧೋನಿ ಜೊತೆಗೆ ತರಬೇತಿ ಕ್ಯಾಂಪ್ ಗೆ ಸೇರಿಕೊಳ್ಳುವ ಸಾಧ‍್ಯತೆಯಿದೆ. ಇದಾದ ಬಳಿಕ ಒಬ್ಬೊಬ್ಬರೇ ಆಟಗಾರರು ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.