ಯುವರಾಜ್ ಫಾರಂನಲ್ಲಿದ್ದಾಗ ಬೌಲಿಂಗ್ ಮಾಡುವುದು ಕಷ್ಟ: ಡುಮಿನಿ

ಗುರುವಾರ, 16 ಏಪ್ರಿಲ್ 2015 (12:56 IST)
ಡೆಲ್ಲಿ ಡೇರ್ ಡೆವಿಲ್ಸ್ ತಮ್ಮ ಸತತ 11 ಪಂದ್ಯಗಳ ಸೋಲಿನ ಸರಣಿಗೆ ಕಿಂಗ್ಸ್ ಇಲೆವೆನ್ ವಿರುದ್ಧ ಜಯಗಳಿಸುವ ಮೂಲಕ ತೆರೆಎಳೆದಿದೆ. ಡೇರ್ ಡೆವಿಲ್ಸ್ ಹಿಂದಿನ ಪಂದ್ಯಗಳಲ್ಲಿ ಅಷ್ಟೇನೂ ಒಳ್ಳೆಯ ಪ್ರದರ್ಶನ ನೀಡಿರದ ಯುವರಾಜ್ ಈ ಪಂದ್ಯದಲ್ಲಿ ಆರ್ಭಟಿಸಿ ತಮ್ಮ ಕೆಟ್ಟ ಫಾರಂ ಹಿಂದೆ ಬಿಟ್ಟಿದ್ದಾರೆ.
 
ಪಂದ್ಯದ ನಂತರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜೆಪಿ ಡುಮಿನಿ ಎಡಗೈ ಆಟಗಾರ ಯುವಿಯನ್ನು ಶ್ಲಾಘಿಸಿ, ಯುವರಾಜ್ ಆ ರೀತಿಯ ಫಾರಂನಲ್ಲಿದ್ದರೆ ವಿಶ್ವದಲ್ಲಿ ಅವರಿಗೆ ಮೇಲುಗೈ ಪಡೆಯುವ ಬೌಲರುಗಳು ಕಡಿಮೆ ಎಂದು ಡುಮಿನಿ ಬಣ್ಣಿಸಿದರು. 
 
ವೀರೇಂದ್ರ ಸೆಹ್ವಾಗ್ ಮತ್ತು ಡೇವಿಡ್ ಮಿಲ್ಲರ್ ಅವರ ವಿಕೆಟ್ ಕಬಳಿಸಿ ಪಂಜಾಬ್ ಇಲೆವನ್ ಸುಮಾರು 15 ರನ್ ಕಡಿಮೆ ಸ್ಕೋರ್ ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡುಮಿನಿ ಕೊನೆಗೂ ಸೋಲಿನ ಸುಳಿಯಿಂದ ಪಾರಾಗಿ ಗೆಲುವಿನ ಮಾರ್ಗ ಹಿಡಿದಿದ್ದಕ್ಕೆ ನಿಟ್ಟುಸಿರು ಬಿಟ್ಟರು.
 
ಯುವರಾಜ್ ಅಲ್ಲದೇ ಅಗರವಾಲ್ ಕೂಡ ಒಳ್ಳೆಯ ಇನ್ನಿಂಗ್ಸ್ ಆಡಿ 48 ಎಸೆತಗಳಲ್ಲಿ 68 ರನ್ ಸ್ಕೋರ್ ಮಾಡಿದರು. ಬಲಗೈ ಆಟಗಾರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದು ತಮ್ಮ ಪ್ರದರ್ಶನದ ಬಗ್ಗೆ ತೀವ್ರ ಸಂತೋಷವಾಗಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ