ಮಹಾರಾಷ್ಟ್ರ ನೀರಿನ ಬಿಕ್ಕಟ್ಟಿಗೆ ಐಪಿಎಲ್ ಹೊಣೆಯಲ್ಲ : ಯುವರಾಜ್ ಸಿಂಗ್

ಶುಕ್ರವಾರ, 22 ಏಪ್ರಿಲ್ 2016 (14:43 IST)
ಮಹಾರಾಷ್ಟ್ರ ರಾಜ್ಯದಲ್ಲಿ ನೀರಿನ ಬಿಕ್ಕಟ್ಟಿಗೆ ಇಂಡಿಯನ್ ಪ್ರೀಮಿಯರ್ ಲೀಗನ್ನು ಹೊಣೆಯಾಗಿಸಬಾರದು ಎಂದು ಭಾರತದ ಹಿರಿಯ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಬಾಂಬೆ ಹೈಕೋರ್ಟ್ ಇತ್ತೀಚೆಗೆ ಎಲ್ಲಾ ಐಪಿಎಲ್ ಪಂದ್ಯಗಳನ್ನು ಮೇ ತಿಂಗಳಿನಿಂದ ಮಹಾರಾಷ್ಟ್ರದ ಹೊರಗೆ ಸ್ಥಳಾಂತರಿಸುವಂತೆ ಸೂಚಿಸಿತ್ತು.  ರಾಜ್ಯವು ಮೂಲತಃ ಮುಂಬೈ, ಪುಣೆ, ನಾಗ್ಪುರದಲ್ಲಿ 20 ಐಪಿಎಲ್ ಪಂದ್ಯಗಳನ್ನು ಆಡಿಸಬೇಕಿತ್ತು.
 
ಭಾರತದ ಬರ ಪರಿಸ್ಥಿತಿಗೆ ಐಪಿಎಲ್ ಅನ್ನು ಹೊಣೆ ಮಾಡುವುದು ಸರಿಯಲ್ಲ. ನಾವು ಕ್ರೀಡೆಯಲ್ಲಿ ಕೌಶಲ್ಯ ಸಾಧಿಸಲು ಯತ್ನಿಸುತ್ತೇವೆ. ಐಪಿಎಲ್ ಮಹಾರಾಷ್ಟ್ರದಲ್ಲಿ ಆಡಿಸದೇ ಇರುವುದಕ್ಕೆ ಯಾವುದೇ ಕಾರಣವಿದೆಯೆಂದು ತಾವು ಭಾವಿಸುವುದಿಲ್ಲ ಎಂದು ಕ್ರೀಡಾಉಡುಪು ಕಂಪನಿ ಪುಮಾ ಬೋಲ್ಡ್ ಟ್ರಿಕ್ಸ್ ಸಂಗ್ರಹದ ಉದ್ಘಾಟನೆಯಲ್ಲಿ ಹೇಳಿದರು.
 
ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಹಿಮ್ಮಡಿ ಗಾಯವಾಗಿದ್ದ ಯುವರಾಜ್ ಹೈದರಾಬಾದ್ ಪರ ಐಪಿಎಲ್ 9ನೇ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು.  ಗುಜರಾತ್ ಲಯನ್ಸ್ ವಿರುದ್ಧ ಮೇ 6ರಂದು ಐಪಿಎಲ್ ಪಂದ್ಯಕ್ಕೆ ವಾಪಸಾಗುವ ಆಶಯವನ್ನು ಅವರು ಹೊಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 
 

ವೆಬ್ದುನಿಯಾವನ್ನು ಓದಿ