ಐಪಿಎಲ್ ಯಾವಾಗಿಂದ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ

ಬುಧವಾರ, 9 ಜನವರಿ 2019 (09:26 IST)
ಮುಂಬೈ: ಈ ಬಾರಿಯ ಐಪಿಎಲ್ ಯಾವಾಗ ನಡೆಯುತ್ತದೆ ಎನ್ನುವುದು ಇದುವರೆಗೆ ಗೊಂದಲಗಳಿದ್ದವು. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ.


ಅದೇ ಸಮಯದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಐಪಿಎಲ್ ವೇಳಾಪಟ್ಟಿ ಬಗ್ಗೆ ಗೊಂದಲಗಳಿದ್ದವು. ಆದರೆ ಈಗ ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಚುನಾವಣೆ ಹಿನ್ನಲೆಯಲ್ಲಿ ದ.ಆಫ್ರಿಕಾಕಕ್ಕೆ ಟೂರ್ನಮೆಂಟ್ ಶಿಫ್ಟ್ ಆಗಲಿವೆ ಎಂಬ ವಾದವನ್ನೆಲ್ಲಾ ಬಿಸಿಸಿಐ ಆಡಳಿತ ಮಂಡಳಿ ತಳ್ಳಿ ಹಾಕಿದ್ದು, ಭಾರತದಲ್ಲೇ ಮಾರ್ಚ್ 23 ರಿಂದ ನಡೆಯಲಿರುವುದಾಗಿ ಹೇಳಿದೆ. ಇನ್ನು, ಸ್ಥಳ, ಸಮಯ ಇತ್ಯಾದಿ ಸಂಪೂರ್ಣ ವೇಳಾಪಟ್ಟಿಯನ್ನು ಫ್ರಾಂಚೈಸಿಗಳ ಜತೆಗೆ ಚರ್ಚಿಸಿ ನಿರ್ಧರಿಸುವುದಾಗಿ ಬಿಸಿಸಿಐ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ