ಐಪಿಎಲ್: ಜನ ಬರದೇ ಇದ್ರೂ ಪರವಾಗಿಲ್ಲ, ಫಾರಿನ್ ಆಟಗಾರರು ಬೇಕು!

ಶುಕ್ರವಾರ, 13 ಮಾರ್ಚ್ 2020 (09:14 IST)
ಮುಂಬೈ: ಈ ಬಾರಿ ಕೊರೋನಾವೈರಸ್ ಭೀತಿಯಿಂದಾಗಿ ಐಪಿಎಲ್ ಕ್ರೀಡಾಕೂಟವೂ ಅನಿಶ್ಚಿತತೆಯಲ್ಲಿದೆ. ಇದೇ ವೇಳೆ ಫ್ರಾಂಚೈಸಿಗಳು ಹೊಸ ಬೇಡಿಕೆಯಿಟ್ಟಿದ್ದಾರೆ.


ಐಪಿಎಲ್ ನೋಡಲು ಜನ ಮೈದಾನಕ್ಕೆ ಬರದೇ ಇದ್ದರೂ ಪರವಾಗಿಲ್ಲ. ಖಾಲಿ ಮೈದಾನದಲ್ಲಿ ಪಂದ್ಯಗಳು ನಡೆಯಲಿ. ಆದರೆ ವಿದೇಶೀ ಆಟಗಾರರೂ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಐಪಿಎಲ್ ಯಥಾವತ್ತಾಗಿ ನಡೆಯಬೇಕು ಎಂದು ಫ್ರಾಂಚೈಸಿಗಳು ಆಗ್ರಹಿಸಿವೆ.

ಐಪಿಎಲ್ ಕೂಟ ರದ್ದಾದರೆ ಕೋಟಿಗಟ್ಟಲೆ ರೂ. ನಷ್ಟವಾಗಲಿದೆ. ಇದೇ ಕಾರಣಕ್ಕೆ ಏನೇ ಆದರೂ ಸರಿಯೇ ಐಪಿಎಲ್ ನಡೆಸಿ ಎಂದು ಫ್ರಾಂಚೈಸಿಗಳು ಒತ್ತಾಯಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ